ವಿಷಯಕ್ಕೆ ಹೋಗಿ

ಮೊಸರು ಮಾರುವ ಹುಡುಗನ ಸೈಕಲ್ ಮತ್ತು ಪ್ಲಾಶ್‍ಬ್ಯಾಕ್ ನೆನಪು





‘ಕಾಲನ ಕೈಗೆ ದೇವರು ಸೃಷ್ಟಿ ಮಾಡಿದ ಜಗತ್ತು ಉಳಿಯುವದಿಲ್ಲವೆಂದ ಮೇಲೆ ನಾವು ಯಾವ ಲೆಕ್ಕ’ ಏಲ್ಲೋ ಓದಿದ ಅಣಿಮುತ್ತು ಮೊನ್ನೆ ದುತ್ತನೆ ಮೆದುಳಿನಲ್ಲಿ ಗುಂಗಿ ಹುಳದಂತೆ ಕಾಡತೊಡಗಿತು. ಕಾರಣವಿಷ್ಟೇ, ಎಮ್.ಎ ಮುಗಿಯುವ ಸಮಯವೂ ಹೌದು, ಅದಕ್ಕಿಂತ ಮುಖ್ಯವಾಗಿ “ಆನಂದಮಾರ್ಗ ಆಶ್ರಮ” ತೊರೆಯಬೇಕಲ್ಲ ಎನ್ನುವ ನೋವು. ಆ ನೋವಿಗೆ ಕಾರಣವಾದವನು ದಿನಾಲೂ ಗಟ್ಟಿ ಕೆನೆ ‘ಮೊಸರು ಮಾರುವ ಹುಡುಗ’ ಮತ್ತು ಆತನ ‘ಸೈಕಲ್’.
ಆ ಹುಡುಗ 7ನೇ ತರಗತಿ. ಯಲ್ಲಪ್ಪ ಮನ್ಸೂರ. ಸುಮಾರು 3 ಕಿ.ಮಿ ಸೈಕಲ್ ತುಳಿದು ಮೊಸರು ಮಾರುವ ಕಾಯಕ ಮಾಡುತ್ತಾನೆ. ಅದಕ್ಕಿಂತ ಹೆಚ್ಚಾಗಿ ಮುಂಜಾನೆಯ ಎಳೆ ಬಿಸಿಲಿನಲ್ಲಿ ಮಲಗಿದ್ದ ಹಾಸಿಗೆ ಹೊದ್ದು ಮಲಗಿದ್ದ ನನಗೆ ಎಚ್ಚರಿಸುವ ಅಲರಾಂ ಬೆಲ್ ಎಂತಲೇ ಹೇಳಬಹುದು.
ಅವನ ಸೈಕಲ್ ಮಾಯಲೋಕದ ಕಿನ್ನರರು ತಮ್ಮ ವಾಹನಗಳಿಗೆ ಶೃಂಗಾರ ಮಾಡಿದಂತೆ ಗಾಲಿಗಳಿಗೆ ರಿಬ್ಬನ್ ಸುತ್ತಿ, ಯುದ್ಧಕ್ಕೆ ಸಿದ್ಧನಾಗಿದ್ದೆನೆ ಎನ್ನುವ ರೀತಿ ಭಾವುಟ ತೋರಿಸಿ, ಗೆಂಡೆಗಳನ್ನು ಗಾಳಿಗೆ ಹಾರಾಡಿಸುತ್ತಾ ಗಂಟೆ ಬಾರಿಸುವ ಗತ್ತು ನನ್ನನ್ನು ಬಾಲ್ಯದ ಪ್ಲಾಶ್‍ಬ್ಯಾಕ್‍ಗೆ ಕರೆದೊಯ್ಯುವಂತೆ ಮಾಡಿತ್ತು.
ತೂತು ಬಿದ್ದು ಪುಕ್ಸಟ್ಟೆ ಅಂಡು ಕಾಣಿಸುವ ದೊಗಳೆ ಚಡ್ಡಿ ಹಾಕಿಕೊಳ್ಳುತ್ತಿದ್ದ ವಯಸ್ಸಿನ ಹುಡುಗ ನಾನಾಗಿದ್ದೆ. ‘ಮೊದ ಮೊದಲು ಕೊಂಡ ಹೀರೋ ಸೈಕಲ್’ ಎಂಬತೆ ಪುಟ್ಟ ಸೈಕಲ್ ನಮ್ಮ ಮನೆಯ ಅಂಗಳವನ್ನು ಅಲಂಕರಿಸಿತ್ತು. ಇಡೀ ಊರಿಗೆ ಮೊದಲ ಸೈಕಲ್. ಊರಿನ ಜನ ಬಂದು ಅದನ್ನು ಮೈಸೂರು ಮಹಾರಾಜರ ಅಂಬಾರಿ ಹೋರುವ ಆನೆಯಂತೆ ನೋಡಿದ್ದೋ ನೋಡಿದ್ದು! ಅಕ್ಕನ ಮೊದಲ ಪೂಜೆಯಿಂದ ಅದರ ಉದ್ಘಾಟಣೆ ಶುರು. ಅಕ್ಕ ಅಲ್ಪಸ್ವಲ್ಪ ಸೈಕಲ್ ಕಲಿತಿದ್ದರಿಂದ ನನಗೆ ಆಕೆಯೆ ಗುರು. ಆಕೆಗೆ ಪೂಸಿ ಹೊಡೆದು ಅವಳಿಂದ ಸೈಕಲ್ ಕಲಿಯಬೇಕು ಎನ್ನುವ ಹಟ ನನ್ನೊಳಗೆ. ಆದರೆ ಅಕ್ಕ ಒಂಥರಾ ಸ್ವಾರ್ಥಿ ಸ್ವಭಾವದವಳು. ಆದರೂ ನನಗೆ ಅದನ್ನು ತಳ್ಳುವ ಪಾಟ ಕಲಿಸಿಕೊಟ್ಟಳು. ನಾನು ಮಾತ್ರ ಅದನ್ನು ತಳ್ಳಬೇಕು, ಅವಳು ಮಹಾರಾಣಿಯ ಹಾಗೆ ಜಮ್ಮಂತ ಸೀಟಿನಲ್ಲಿ ಕುಳಿತು ಹೋಗಬೇಕು!
ಬಂದ ಒಂದು ತಿಂಗಳವರೆಗೂ ನನಗೆ ಸೈಕಲ್ ನಡೆಸುವವದಿರಲಿ ಅಟ್‍ಲಿಸ್ಟ್ ಅದನ್ನು ಹಿಡಿಯುವ ಅಧಿಕಾರ ಕೊಡಲಿಲ್ಲ. ನನಗೋ ಹೊಟ್ಟೆಯಲ್ಲಿ ಮೆಣಸಿನ ಕಾರ ಕಲಿಸಿ ಕರಳು ಹಿಂಡಿದಂತೆ ಭಯಂಕರ ಸಿಟ್ಟು.
ಒಂದು ದಿನ ಅಪ್ಪನ ಕಣ್ಣು ತಪ್ಪಿಸಿ ಸೈಕಲ್‍ನ್ನು ಮೆಲ್ಲಗೆ ಊರ ಶಾಲೆಯ ಮೈದಾನಕ್ಕೆ ತಳ್ಳಿಕೊಂಡು ಏದುರುಸಿರು ಬಿಡ್ಡುತ್ತಾ ಬಂದಾಗ ಎದುರು ಮನೆಯ ಅಣ್ಣ ಬಂದು ಕಲಿಸುತ್ತೇನೆ ಬಾ ಎಂದು ಮೊದಲು ಆತ ಎರಡ್ಮೂರು ರೌಂಡು ಸುತ್ತಾಡಿಸಿ ನನ್ನನ್ನು ಸಾಯಂಕಾಳ ಸೂರ್ಯ ಮೂಳುಗುವವರೆಗೂ ಹಿಂದೆ ಕೂಡಿಸಿ ತಾನು ಮಾತ್ರ ಊರ ತುಂಬೆ ಮೆರವಣಿಗೆ ಮಾಡುತ್ತಾ ಮಜಾ ಮಾಡಿದ. ಈ ವಿಷಯ ಅಪ್ಪನಿಗೆ ಗೊತ್ತಾಗಿ ಹುಟ್ಟುಡುಗೆಯಲ್ಲಿ ನಿಲ್ಲಿಸಿ ‘ಏನಾರೆ ಹೆಚ್ಚು ಕಮ್ಮಿ ಆತಂದ್ರ’ ಅಂತ ಬಯ್ದು ಬೆಲ್ಟ್‍ನಿಂದ ಬಾರಿಸಿದ. ಅವು ಪೋಸ್ಟಾಫೀಸ್‍ನಲ್ಲಿ ಹಾಕುವ ಸಿಕ್ಕಾ ಎಂಬಂತೆ ಮೂಡಿ ಒಂದು ವಾರ ‘ಸೈಕಲ್’ ಕಡೆ ತಲೆಹಾಕಿ ಮಲಗಲಿಲ್ಲ. ಅಮ್ಮನಿಗೆ ಕನಿಕರ ಬಂದು ನಾಳೆಯಿಂದ ಕಲಿಯುವಂತೆ ಮಲಗು ಎಂದು ಬೆನ್ನು ಸವರಿದಳು.
ಅಕ್ಕ ನನ್ನ ಸ್ಥಿತಿ ಕಂಡು ನಗುತ್ತಾ ಸೈಕಲ್ ಕಲಿಸುತ್ತೇನೆ ಬಾರೋ ಎಂದಾಗ ನನಗೆ ಎಲ್ಲಿಲ್ಲದ ಸಂತೋಷ. ಅಷ್ಟು ಇಷ್ಟು ಕಲಿತು, ಬ್ಯಾಲನ್ಸ್ ಮಾಡಿ, ಕಡೆಗೆ ಸ್ವತಃ ಪ್ರಯತ್ನ ಮಾಡಿ ಮೊಣಕಾಲು ಕೆತ್ತಿ ಹೋದರು ‘ಏಕಲವ್ಯ’ ನಂತೆ ಅಕ್ಕನನ್ನು ತಿರಸ್ಕರಿಸಿ ಸೈಕಲ್ ಓಡಿಸತೊಡಗಿದೆ. ಅದರಲ್ಲಿ ಸರ್ಕಸ್ ಮಾಡುವದು, ಬ್ರೇಕ್ ಹಾಕುವದು ಇತ್ಯಾದಿ ಸ್ಟಂಟ್‍ಗಳನ್ನು ಮಾಡುತ್ತಾ ದಿನಕ್ಕೆ ತಲೆಯಲ್ಲಿ ನಾಲ್ಕಾರೂ ಗುಮಟೆಗಳನ್ನು ಉಬ್ಬಿಸಿಕೋಳ್ಳುತ್ತಿದ್ದೆ. ಆಗ ಅದರಲ್ಲಿ ‘ಮಿ.ಪರಫೆಕ್ಟ್’ ಆದೆ.

ಇದು ನಡೆದ ವೃತ್ತಾಂತ. ಆದರೆ ನಡೆಯಬಾರದ ವೃತ್ತಾಂತವೊಂದು ನಡೆದು ಹೋಗಿತು. ಬಾಲ್ಯದ ಗೆಳಯಂನಂತೆ ಅದಾ ನನ್ನ ಜೊತೆಯಲ್ಲಿಯೇ ಓಡಿ, ಗಾಳಿ ಮಳೆಯನ್ನದೇ ನನ್ನನ್ನೂ ಕೂಡಿಸಿಕೊಂಡು, ತಾನೂ ಮಾತ್ರ ದಣಿದು ಸುಸ್ತಾದ ಸೈಕಲ್ ಎಮ್.ಎ ಬಂದಾಗ ಮೂಲೆಯಲ್ಲಿ ಹ್ಯಾಪೂಮೋರೆ ಹಾಕಿಕೊಂಡು ನನ್ನನ್ನು ಬಿಳ್ಕೊಟ್ಟಿತು. ಬಂದ ವಾರದಲ್ಲಿ ನನಗೆ ಗೊತ್ತಿಲ್ಲದೆ ತಮ್ಮ ‘ಮಂಕುತಿಮ್ಮ’ ಅದನ್ನು ಮಾರಿದಾಗ ಮುಚ್ಚಣಿಕೆ ಕಳೆದು ಹೋದ ಪೆನ್ನಿಗೆ ನೋವಾಗುವಷ್ಟು ಅತ್ತು ಗೆಳೆಯರಿಗೆ ಸ್ಯಾಡ್ ಪಾರ್ಟಿ ಕೊಡಿಸಿದೆ. ಅದು ಕೊಡುವ ಹಳೆಯ ನೆನಪುಗಳು ಇಂದು ಹೃದಯದಲ್ಲಿ ತೂತು ಕೊರೆಯುತ್ತಿದೆ. ಡಬಲ್ ರೈಡಿಂಗ್ ಮಾಡಿದ್ದು, ಎದುರು ಮನೆ ಹುಡುಗಿಗೆ ಗುದ್ದಿ ಅವರಪ್ಪನಿಂದ ಹಿಡಿದು ನಮ್ಮಪ್ಪನವರೆಗೂ ಒದೆ ತಿಂದಿದ್ದು, ಸ್ವಲ್ಪದರಲ್ಲಿಯೇ ಬಸ್ಸು ಗುದ್ದುವ ಪ್ರಾಣಾಪಾಯದಿಂದ ಪಾರಾಗಿದ್ದು, ಪಂಚರ್ ಆಗಿ ಮೂರು ಕಿ.ಮಿ ತಳ್ಳಿಕೊಂಡು ಬಂದಿದ್ದು, ಸಿಂಗಲ್ ಆಗಿ ಅದರ ಜೋತೆ ಪೋಟೋ ಹೊಡೆಸಿಕೊಂಡಿದ್ದು ಎಲ್ಲವೂ ಕಾಡತೊಡಗಿದೆ.
ಅಂದಿನ ಅನುಭವ ಇಂದಾಗುತ್ತಿದೆ. ‘ಆನಂದ ಮಾರ್ಗ ಆಶ್ರಮ’ ತೊರೆಯುವ ಸಂಕಟ. ಎರಡು ವರ್ಷ ಇಲ್ಲಿನ ಗೋಡೆ, ಮಳೆ ಬಂದರೆ ಸೋರುವ ಹೆಂಚು, ಗೆಳಯರಾದ ಹಾವಿನ ಮರಿಗಳು, ಕೆಲಮ್ಮೊಮ್ಮೆ ಹಾಸಿಗೆ ಹಂಚಿಕೊಳ್ಳುವ ಕಪ್ಪೆಮರಿಗಳು, ಹೆಮ್ಮರವಾಗಿ ಬೆಳದು ನಿಂತಿರುವ ನುಗ್ಗೆಕಾಯಿ ಮರ, ನಾನೇ ಶ್ರಮದಾನ ಮಾಡಿ ಕಟ್ಟಿದ ಕಟ್ಟೆ, ಹಿತವಾದ ತಂಗಾಳಿ, ಪ್ರಶಾಂತವಾದ ವಾತಾವರಣ, ಟೈವಾಕ್ ಕಂಪನಿಯ ಸೈರನ್ನು, ಬಾಜು ರೂಮಿನ ‘ಡಿಕೆ’ ಎಂತಿರುವ ಅಶೋಕ ಮಹಾರಾಜ್ ಒಂದಲ್ಲ ಎರಡಲ್ಲ ಇಡೀ ಬದುಕಿನ ಭಾಗವೇ ನನಗೆ ಟಾಟಾ ಮಾಡುವ ಸಮಯ ಬಂದಿದೆ.
ಆ ಹುಡುಗನ ಸೈಕಲ್ ನೋಡಿದಾಗ ‘ಜೀವನದ ಸೈಕಲ್ ಓಡಿಸಲು ಧಾರವಾಡದ ಊರಿಗೆ ಬಂದರುವೆ, ಮತ್ತೇಕೆ ಚಿಂತೆ ಹಿಂದಿನ ಊರಿನ ಹಾದಿಬಿಟ್ಟು ನಡೆ ಮುಂದಿನ ಊರಿಗೆ’ ಎನ್ನುವ ಮಾತು ನನ್ನೊಳಗೆ ತಿಗಣೆಯಂತೆ ಕಚ್ಚಿ ಅಣುಕಿಸಿದಂತಾಗುತ್ತಿದೆ.
ಬಂದು ಕಲಿತದೇಷ್ಟೂ, ಹಾಳು ಮಾಡಿಕೊಂಡಿದೇಷ್ಟೂ ಎಂದು ಮೌಲ್ಯಮಾಪನ ಮಾಡಿದಾಗ ಮುಂದಿನ ಜೀವನದ ಬಗ್ಗೆ ನಡುಕ ಹುಟ್ಟತೊಡಗಿದೆ. ಸೋಮಾರಿತನದಿಂದ ಓದದೇ ಬರೆಯದೇ ಸಿನಿಮಾ, ಪಾರ್ಟಿ, ಪ್ರವಾಸ ಅಂತ ಕ್ಲಾಸಿಗೆ ಚಕ್ಕರ್ ಹಾಕಿ ಮಜಾಮಾಡಿದ್ದು ಈಗ ಮುಳ್ಳಿನಂತೆ ಚುಚ್ಚುತ್ತಿದೆ. ಗಾಲಿಗೆ ಮುಳ್ಳು ಚುಚ್ಚಿದರೆ ಸೈಕಲ್ ಓಡುವದಿಲ್ಲ, ಜೀವನಕ್ಕೆ ಸೋಮಾರಿತನದ ಮುಳ್ಳು ಚುಚ್ಚಿದರೆ?
ಲೇಖನ : ಸಂಗಮೇಶ ಡಿಗ್ಗಿ
8553550012

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಎಚ್ಚರವಿರುವುದು ಕನಸುಗಳು ಮಾತ್ರ

ಝಗಮಗಿಸುವ ರಂಗಮಂಚದಲ್ಲಿ ಬಣ್ಣ ಬಣ್ಣದ ವೇಷಭೂಷಣಗಳ ಝಲಕ್ಕು ಕಣ್ಣು ಕುಕ್ಕಿಸುತ್ತದೆ. ಮಾತಿಗೊಮ್ಮೆ ಶಹ್ಬಾಶ್ ಹೇಳುತ್ತಿದ್ದ ತುಟಿ ನಾಟಕ ಮುಗಿದ ಮೇಲೆ ಇದ್ದಕ್ಕಿದಂತೆ ತಟಟ್ಥವಾಗಿ ಬಿಡುತ್ತದೆ. ಮನದಾಳದಲ್ಲಿ ಹಾದು ಹೋದ ಪಾತ್ರಗಳ ನಿಜ ಕಲ್ಪನಾ ಲೋಕ ಮರೆಯಾಗಿ ವಾಸ್ತವದ ಆದಿಮಪ್ರಜ್ಞೆಗೆ ಮನಸ್ಸು ಬಂದಿಳಿಯುತ್ತದೆ. ಚಪ್ಪಾಳೆಯ ಕರಾಡತನ ಮುಗಿದ ಮೇಲೆ ಪಾತ್ರಧಾರಿಗಳ ನಿರ್ಗಮನದ ಜೊತೆ ಪ್ರೇಕ್ಷಕರು ನಡೆಯುತ್ತಾರೆ ಜೀವನ ಎಂಬ ನಾಟಕ ಆಡಲು. ರಂಗಮಂದಿರ ಮಾತ್ರ ತಾನು ಇದ್ದಲ್ಲಿಯೇ ಇರುತ್ತದೆ ಯಾವ ಮುಖಭಾವ ಬದಲಿಸದೆ. ಅದೇ ಹಳೆಯ ಗೋಡೆ, ಸೂರ್ಯನ ಬೆಳಕನ್ನು ತಡವದೇ ಭೂಮಿಗೆ ತಲುಪಿಸಿವ ಛಾವಣಿ, ತುಕ್ಕು ಹಿಡಿದ ಕಬ್ಬಿಣದ ಕುರ್ಚಿಗಳು, ಮುಂದಿನ ನಾಟಕದ ಫಲಕ, ಹಿಂದಿನ ನಾಟಕದ ಟೀಕೇಟು, ಯಾರೋ ಸೇದಿ ಎಸೆದ ಗಣೇಶ ಬಿಡಿ, ಉಗುಳಿದ ಪಾನ್‍ಮಸಾಲ, ಬಸ್‍ಟಿಕೆಟ್, ತಿಂದು ಬಿಸಾಡಿದ ಕರ್ರುಂಕುರ್ರುಂ ಕುರುಕುರೆ ಬ್ಯಾಗಡಿ ಚೀಲ, ಮತ್ತೇ ಅನಾಥವಾಗಿ ಬಿದ್ದಿರುವ ಒಂದು ಒಂಟಿ ಚಪ್ಪಲಿ. ಕುಣಿತದ ಭಾರಕ್ಕೆ ಸುಸ್ತಾಗಿ ರಂಗಮಂಚ ನಿದ್ರಿಸುತ್ತದೆ ನಾಳೆಯ ಕುಣಿತಕ್ಕೆ ಮೈಕೊಡಲು. ಬಣ್ಣಬಣ್ಣದ ಲೈಟ್‍ಗಳು ನೇಣಿಗೆ ಸಿಲುಕಿದಂತೆ ಕಾಣುತ್ತದೆ. ದೂರದಲ್ಲಿ ನಾಯಿ ನಾಟಕದ ಬ್ಯಾನರ್‍ಗೆ ಅಂಟಿಕೊಂಡು ಮಳೆ ಸಿಡಿಸುತ್ತಿರುತ್ತದೆ. ದೊಡ್ಡ ಹೊಟ್ಟೆಯ ಮೇಲೆ ಕೈಯಾಡಿಸುತ್ತಾ ನಾಟಕದ ಮಾಲೀಕ ಕಲೆಕ್ಷನ್ ರೂಂಗೆ ಎಂಟ್ರಿ ಕೊಡುತ್ತಾನೆ. ಸರಳುಗಳಿಂದ ಆವೃತ್ತವಾಗಿರುವ ಚಿಕ್ಕ ತಾತ್ಕಾಲಿಕ ಜೋಪಡ...

ಮಾನವ ಘನತೆಯ ಪ್ರತಿಪಾದಕ: ಬಿಜವಾಡ ವಿಲ್ಸನ್

 ಮಲಹೊರುವ ಪದ್ದತಿ ತನ್ನ ಕುಲ ಕಸುಬು ಎಂಬ ಕಾರಣಕ್ಕೆ ಆತ್ಮಹತ್ಯೆಗೆ ಮುಂದಾಗಿದ್ದ ಯುವಕನೋರ್ವ ತನ್ನ ದೃಡ ನಿರ್ಧಾರದಿಂದ ದೇಶಾದ್ಯಂತ ಮಲ ಹೊರುವ ಅಮಾನವೀಯ ಪದ್ಧತಿ ವಿರುದ್ಧ ಜನಾಂದೋಲನ ರೂಪಿಸಿ ಮಾನವ ಘನತೆಯ ಬದುಕು (ಡಿಗ್ನಿಟಿ ಆಪ್ ಲೈಪ್)ನ್ನು ತನ್ನ ಹೋರಾಟದ ಮೂಲಕ ಎತ್ತಿ ಹಿಡಿದ ಉದ್ದೇಶಕ್ಕಾಗಿ 2016ನೇ ಸಾಲಿನ ಪ್ರತಿಷ್ಠಿತ ಮ್ಯಾಗ್ಸೆಸೆ ಪ್ರಶಸ್ತಿ ಲಭಿಸಿದೆ. ಅವರ ಹೆಸರು ಕೋಲಾರ ಜಿಲ್ಲೆಯ ಕೆಜಿಎಪ್ ಮೂಲದ ಬಿಜವಾಡ ವಿಲ್ಸನ್. ಆಂದ್ರದ ಓಂಗೋಲ್ ಜಿಲ್ಲೆಯ ಕಂಬಾಲದೇನು ಗ್ರಾಮದ ಬಿಜವಾಡ ಜಾಕೋಬ್ ಎಂಬುವವರು 1935ರ ಸಂದರ್ಭದಲ್ಲಿ ಕೆಜಿಎಪ್‌ಗೆ ಆಗಮಿಸಿ ಇಲ್ಲಿನ ಬಿಜಿಎಂಎಲ್ ಕಾರ್ಖಾನೆಯಲ್ಲಿ ಪೌರಕಾರ್ಮಿಕರಾಗಿ ಕೆಲಸಕ್ಕೆ ಸೇರಿಕೊಳ್ಳುತ್ತಾರೆ. 1966ರಲ್ಲಿ ವಿಲ್ಸನ್ ಜನಿಸಿದರು. ತಮ್ಮ ಪ್ರಾಥಮಿಕ ಶಿಕ್ಷಣವನ್ನು ನೆರೆಯ ಕುಪ್ಪಂನಲ್ಲಿ ನೆರವೇರಿಸಿದ ವಿಲ್ಸನ್ ಕೆಜಿಎಪ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿ ಪಡೆದಿದ್ದಾರೆ. ತದಂತರ ಹೈದರಾಬಾದ್ ವಿವಿಯಲ್ಲಿ ರಾಜಕೀಯ ಶಾಸದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಲಹೊರುವ ಕುಲ ಕಸುಬು ತನ್ನ ಕೊನೆಯ ಮಗನಿಗೆ ತಟ್ಟದಿರಲಿ ಎಂಬ ಕಾರಣಕ್ಕೆ ವಿಲ್ಸನ್ ಅವರನ್ನು ಕುಪ್ಪಂನ ವಿದ್ಯಾರ್ಥಿ ನಿಲಯದಲ್ಲಿ ಸೇರಿಸಿ ಶಿಕ್ಷಣ ಕೊಡಿಸಿದ್ದೇ ಪಾಲಕರ ಮಹತ್ಸಾಧನೆಯಾಗಿತ್ತು. ಮಲ ಹೊರುವ ಸಮುದಾಯದವ ಎಂಬ ಕಾರಣಕ್ಕೆ ಸಹ ಪಾಠಿಗಳಿಂದ ಅವಮಾನಕೊಳಗಾಗಿದ್ದ ವಿಲ್ಸನ್ ಇದಕ್ಕೆ ಕಾರಣ ಹುಡುಕಲು ಹೊರಟಾಗ ಪಾಲಕರು ಸತ್ಯ ಮರೆಮ...

ಬಾ ಮಳೆಯೆ ಬಾ....

ಮೂರುಸಂಜೆ ಸಮಯ. ಭೂಮಿಯನ್ನು ಅಪ್ಪಿ ತಬ್ಬಿಕೊಳ್ಳಲು ಮಳೆ ಹನಿಗಳು ಪೈಪೋಟಿಗೆ ಬಿದ್ದಂತೆ ತಾಮುಂದು ನಿಮುಂದು ಎಂದು ಧರಣಿಯ ಕೆನ್ನೆಗೆ ಮುತ್ತಿಕ್ಕುತ್ತವೆ. ಕಾದು ಸುಡುವ ಹಂಚಾಗಿದ್ದ ಭೂಮಿಗೆ ತಣ್ಣನೆಯ ಬಟ್ಟೆಯನ್ನು ಹೊದಿಸಿದ ಅನುಭವ. ಊರ ತುಂಬ ಪಸರಿಸಿದ ಮಣ್ಣ ಸುವಾಸನೆಗೆ ಪಾರಿಜಾತದ ಘಮವು ಸಪ್ಪೆಯಾಗಿದೆ. ಯಾವ ಸೀಮೆಯ, ಯಾವ ಊರಿನ, ಯಾವ ಕೇರಿಯ ನೀರು ಆವಿಯಾಗಿ, ಹೆಪ್ಪುಗಟ್ಟಿ, ಮೋಡವಾಗಿ ಕರಗಿ ನೀರಾಗಿ ಪರಿಚಯವಿಲ್ಲದ ಜಾಗದಲ್ಲಿ ನಾಚಿಕೆ ಪಟ್ಟುಕೊಳ್ಳದೆ ಜಂಬವಿಲ್ಲದೆ ಸುರಿಯುವ ಅಮೃತಘಳಿಗೆಗೆ ಮಣ್ಣಿನೊಳಗೆ ಅಡಗಿ ಕುಳಿತ ಬೀಜ, ಸಸಿ, ಬೇರು ಬಾಯ್ತೆರೆದು ನಿಂತಿರುತ್ತದೆ ತುದಿಗಾಲ ಮೇಲೆ ಬೊಗಸೆಗಣನ್ನನ್ನು ಅರಳಿಸುತ್ತಾ. ಅಲ್ಲೆಲ್ಲೂ ಅಣಬೆಗಳು ಹಿಡಿಮಳೆಗೆ ಭೂಮಿ ನೆನೆಯುವದನ್ನು ತಪ್ಪಿಸಲು ಕ್ಷಣಮಾತ್ರದಲ್ಲಿ ಹೂವಾಗಿ ಅರಳಿ ನಿಲ್ಲುತ್ತವೆ ಹಬ್ಬದ ಛತ್ರಿ ಚಾಮರ ಕಂಡಂತೆ. ಪುಟುಪುಟು ನೆಗೆಯುತ್ತಾ ಓಡಾಡುವ ಕಪ್ಪೆಮರಿಗಳ ಆಟ ಪುಟ್‍ಬಾಲ್ ಆಟ ನೋಡುವಷ್ಟೇ ಮಜಭೂತವಾಗಿರುತ್ತದೆ. ದೇವರ ಆಟ ಬಲ್ಲವರ್ಯಾರು? ಹಸಿದು ಬರಗೆಟ್ಟ ಗಿಡಗಳು ಹಸಿರಾಗಲೂ ಜಡಿಮಳೆ ಬಸಿರಾಗುವಂತೆ ಮಾಡುತ್ತದೆ. ಎಲೆಯುದರಿ ಮುದುಡಿಕೊಂಡ ಗಿಡಗಳು ಮೆಲ್ಲನೆ ಮೈ ಕೊಡವಿಕೊಂಡು ಹಣ್ಣಾದ ಹಳದಿ ಎಲೆಗಳನ್ನು ಉದುರಿಸಿ ಚಿಗುರೆಲೆಗೆ ಜಾಗ ಮಾಡಿಕೊಡುತ್ತದೆ. ಮೆಲ್ಲಗೆ ಹೂವೊಂದು ಗರ್ಭದಿಂದ ಹೊರಬಂದು ನಗುತ್ತಾ ನಾಚಿ ನೀರಾಗುತ್ತದೆ ದುಂಬಿ ಬಂದು ಕುಳಿತಾಗ. ಕೊಟ್ಟಿಗೆಯಲ್ಲಿ ಧೂಳು ಬಡ...