ವಿಷಯಕ್ಕೆ ಹೋಗಿ

ವಂಕ ಮೂತಿ ಹನುಮಪ್ಪನ ಸಂಕಟ


‘ದೇವ್ರೇ ನನ್ ಹುಡುಗಿ ಬಂದಾಳ, ಅವ್ಳು ನೋಡಾಕ ಸನ್ನಿಲಿಯೋಲ್ ತರಾ ಅಲ್ಲದಿದ್ರೂ ಒಂದ್ ರೆಂಜಿಗೆ ರಮ್ಯಾ, ಮಲ್ಲಿಕಾ ಶರಾವತ್ ಇದ್ದಾಂಗ ಅದಾಳಾ... ಅಕಿಗೆ ನಂಗ ಸೆಟ್ ಮಾಡಿದ್ರ ನಿಂಗ ಒಂದು ಕಾಯಿ ಒಡೀತೀನಿ’ ಅಂತ ಹುಡುಗನೊಬ್ಬ ಶನಿವಾರದ ಸಾಯಂಕಾಲದ ಸಮಯದಲ್ಲಿ ಒಂದೇ ಉಸುರಿಗೆ ಬೇಡಿಕೊಂಡ.
ಆ ದೇವರು ಬ್ಯಾರೆ ಯಾರು ಅಲ್ಲ. ವಾಮನಪುತ್ರ, ರಾಮನಭಕ್ತ, ಗುಡ್ಡವನೇತ್ತಿದ ಆಂಜನೇಯ, ಬ್ರಹ್ಮಾಂಡದಲ್ಲಿ ಮೊದಲಬಾರಿಗೆ ಸಿಕ್ಸ್‍ಪ್ಯಾಕ ಮಾಡಿಕೊಂಡ ಹನುಮಂತ, ನನ್ ಪಾಲಿಗೆ ವಂಕ ಮೂತಿ ಹನುಮ್ಯಾ..!
ವಂಕ ಮೂತಿ ಹನುಮ್ಯಾ ಮೊದಲಾ ಬ್ರಹ್ಮಚಾರಿ. ಅವನಿಗೆ ಹುಡುಗಿ ಸಿಗಲಾರದೆ ಮೂತಿ ಸಿಂಡರಿಸಿಕೊಂಡು ನಿಂತಲ್ಲೇ ನಿಂತು ಕಾಲು ನೊಯಿದರೂ ಪರವಾಗಿಲ್ಲ ಜಗವ ರಕ್ಷಿಸೋ ಪಣ ತೊಟ್ಟಿದ್ದಾನೆ. ಅಂತವನ ಎದುರು ಈ ಹುಡುಗಾ ಹುಡುಗಿ ಕೊಡು ಎಂದು ಎಟಿಎಮ್ ಮುಂದೆ ಡ್ರಾ ಮಾಡಿಕೋಳ್ಳುವ ರೀತಿ ಬೇಡ್ತಾ ಇದ್ದರೆ ಆ ದ್ಯಾವ್ರಿಗೆ ಹೊಟ್ಟ್ಯಾಗ ಖಾರ ಕಲಸಿದಂಗ ಆಗಲಾರದೆ ಇರಲಾರದು.
ಅದರಾಗ ಬ್ಯಾರೆ ಈ ಹುಡುಗ್ಯಾರು ನೀಲಿ,ಹಳದಿ,ಕೆಂಪು ಜಗಮಗಿಸೋ ಬಟ್ಟಿ ಹಾಕ್ಕೊಂಡು, ಇಡೀ ಊರಿಗೆ ಪುಗಸೆಟ್ಟೆ ಸೆಂಟ್ ವಾಸನೆ ಬಡಿಸುತ್ತಾ, ಮಲ್ಲಿಗೆ, ರೋಜ್, ಸೇವಂತಿ ಇತ್ಯಾದಿ ಮುಡಿದುಕೊಂಡು ಹನುಮಪ್ಪನ ಗುಡಿಗೆ ಬಂದ್ರ ಆ ದೇವರಿಗೆ ಟೆಂಪರೇಚರ್ ಬಂದು ಜ್ವರಾಗೀರಾ ಬರಾಂಗಿಲೇನು ಅನ್ನುವದು ನನ್ನ ಬಹುದೊಡ್ಡ ಬಿಡಿಸಲಾರದ ಗಣಿತ ಯಕ್ಷಪ್ರಶ್ನೆಯಾಗಿದೆ.
ಅವನಿಗೂ ಆಸೆ ಇರುತಲ್ವಾ..? ನನಗೂ ಸಂಸಾರ ಮಾಡೋಕೇ ಅಲ್ಲದಿದ್ದರೂ, ಅಟ್‍ಲಿಷ್ಟ್ ಒಂದು ಫಿಗರ್ ಆದ್ರೂ ಮೆಂಟೈನ್ ಮಾಡಬೇಕೆಂದು. ಆದರೆ ಸವ್ಯಸಾಚಿಯಾದ ಹನುಮಪ್ಪ ಎದುರಿಗೆ ದೀಪಿಕಾ ಪಡುಕೋಣೆ ನಿಂತರೂ ಸರಿಯೆ, ಬಾಜು ಮನೆ ಚಂದ್ರಕಲಾ ನಿಂತರೂ ಸರಿಯೇ ದಪ್ಪ ಕಣ್ಣು ಬಿಡಕೋತ ಅವರ ಆಸೆಗಳನ್ನು ಪೂರೈಸುತ್ತಾ ಮಹಾನ್ ‘ಗಾಡ್’ಫಾದರ್ ಎನಿಸಿಕೊಂಡಿದ್ದಾನೆ.
ಶನಿವಾರ ಬಂತ್ರದ್ರ ಸಾಕು ಈ ಪಡ್ಡೆ ಹೈಕಳಿಗೆ ಹನುಮಪ್ಪನ ಗುಡಿಯೇ ಕಾಲೇಜ್ ಕ್ಯಾಂಪಸ್ ಆಗಿ ಬದಲಾಗುತ್ತದೆ. ಬರುವ ಹುಡುಗರಿಗೆ, ಹುಡುಗಿಯರಿಗೆ, ಆಗ ತಾನೇ ಬಡ್ತಿ ಹೊಂದಿದ ಆಂಟಿಯರಿಗೆ ‘ಕಾಳು’ ಹಾಕಲು ರೆಡಿಯಾಗುತ್ತಾರೆ. ಇದ್ಯಾವುದರ ಅರಿವಿಲ್ಲದೇ ನನ್ನ ಪ್ರೀತಿಯ ಹನುಮ್ಯಾ ಆರ್ಶಿವದಿಸಿ ಪ್ರಸಾದ ನಿಡುತ್ತಾನೆ. ಅವನು ಮಾತ್ರ ‘ಉಪ್ಪಿನ’ ನೈವೀದ್ಯ’ ಸ್ವೀಕರಿಸಿ., ಭಕ್ತಾಧಿಗಳಿಗೆ ಸಿಹಿ ಬಾಳೆಹಣ್ಣು ನೀಡಿ ಸಂತಸ ಪಡುತ್ತಾನೆ.
ಆದರೆ ಅವನ ಸಂಕಟ ಕೇಳುವವರ್ಯಾರು..? ಎಲ್ಲಾ ದೇವರಿಗೂ ಎರಡೆರಡು ಹೆಂಡರೂ ಇರುವ ಹಾಗೇ ಅವನಿಗೆ ಒಂದಾದರೂ ಹೆಂಡ್ತಿ ಇರಬಾರದಾ.? ರಾಮ ತನ್ನ ಹೆಂಡರನ್ನು ಸಮುದ್ರದಿಂದ ಕರೆಸಿಕೊಳ್ಳಲಿ ಇವನನ್ನು ‘ಮೀಡೀಯೇಟರ್’ ಆಗಿ ಬಳಸಿಕೊಂಡ. ತನ್ನ ಸಂಸಾರವನ್ನು ಕಾಪಾಡಿದ ಅವನಿಗೆ ಒಂದು ಹುಡುಗಿಯನ್ನು ನೋಡಲಿಲ್ಲವಲ್ಲಾ ಇದು ಅನ್ಯಾಯವಲ್ಲೇದೇ ಮತ್ತೇನು..? ರಾಮನ ಜಾಗದಲ್ಲಿ ನಾನಿದ್ದರೆ ಅವನಿಗೆ ಒಂದು ಹುಡುಗಿಯನ್ನು ಗೊತ್ತು ಮಾಡಿ ಆಕಿ ಜೋತೆಗೆ ‘ಹನಿಮೂನ್’ಗೇ ಶ್ರೀಲಂಕಾಕ್ಕೆ ಕಳುಹಿಸುತ್ತಿದ್ದೆ..!
ಸುಮಾರು ವರ್ಷದಿಂದ ನಿಂತೇ ಇದ್ದರೂ ಅವನಿಗೆ ಯಾರಾದ್ರೂ ‘ಸ್ವಲ್ಪ ಕುರ್ಚಿ ಮ್ಯಾಗ ಕೂಡು’ ಅಂತ ಹೇಳಿಲ್ಲ. ಅವರ ಆಸೆ ಈಡೇರಿಸೋದಕ್ಕೆ ಹನುಮಪ್ಪ ಬೇಕು. ಆದ್ರ ಅವನ ಬಗ್ಗೆ ಕಾಳಜಿ ಮಾತ್ರ ಯಾರು ಮಾಡಂಗಿಲ್ಲ. ಅದು ಅನ್ಯಾಯದ ಪರಮಾವಧಿ ಅಲ್ಲದೇ ಮತ್ತೇನು ಅಲ್ಲ. ಪಾಪ ಅವನು ಸುಪ್ರೀಂಕೋರ್ಟ್‍ಗೆ ‘ಮಾನನಷ್ಟ ಮೊಕದ್ದೆಮೆ’ ಹೂಡಲು ಅವನಿಗೆ ಕಾನೂನು ಗೋತ್ತಿಲ್ಲ.
ಹುಡುಗಾ ಹುಡುಗಿ ಅವನ ಮುಂದ ಲವ್ ಸಕ್ಸಸ್ ಮಾಡಿದ್ರಾ ನಿಂಗೆ ತುಪ್ಪದ ದೀಪ ಹಚ್ಚತೀವಿ ಅಂತ ಅಂತಾರ. ಅವಂತ್ರೂ ತುಪ್ಪಾ ತಿಲ್ಲಾಕ ಎದ್ದು ಬಂದಿದ್ದು ನೋಡಿಲ್ಲ. ಬರೀ ಊದಿನಕಡ್ಡಿ ಹೋಗಿ ಮುಗನ್ಯಾಗ ತುಂಬಕೋತ ನಿಂತಾನ. ಹೋಗಿ ಮೂಗನ್ಯಾಗ ಹೊಕ್ರು ಒಂದು ದಿನಾನು ಸೀನಿಲ್ಲ, ಕೆಮ್ಮಿಲ್ಲ.
ಚಳ್ಯಾಗ ಮೈಮ್ಯಾಲ ತಣ್ಣೀರ ಸುರಿದು ಜಳಕಾ ಮಾಡಿಸಿದ್ರೂ ‘ಚಳಿ ಚಳಿ ತಾಳೆನು ಈ ಚಳಿಯ’ ಅಂತ ಹಾಡ ಹಾಡಿಲ್ಲ. ಕೆಂಪ ಟಾವೆಲ್ ಸುತ್ತುವಾಗ ಇದು ಬೋರು ಒಂದ್ ಜೀನ್ಸಪ್ಯಾಂಟ್ ಕೊಡ್ಸಿ ಅಂತ ಅಂಗಲಾಚಿಲ್ಲ. ಬಾಳ ಒಳ್ಳೆಯ ದೇವರು ಅಂವ.
ಬರೋ ಭಕ್ತಾಧಿಗಳೆಲ್ಲಾ ‘ಡಣ್ ಡಣ್’ ಅಂತ ಒಂದೇ ಸಮನೆ ಗಂಟೆ ಬಾರಿಸಿದ್ರೂ ಕಿರಿಕಿರಿಯಾಗ್ತದ, ಕಿವಿ ಕಿವುಡಾಗತ್ದಾದ ‘ಡೋಂಟ್ ಡಿಸ್ಟರ್ಬ್’ ಅಂತ ಬಯ್ದಿಲ್ಲ. ಪಾಪಾ ಅನಿಸುತ್ತೆ. ಆ ಪೂಜಾರಿ ಮಹಾಶಹ ಅವನ ಕಿವಿಯೊಳಗ ಹತ್ತಿಯಾದ್ರೂ ಇಡಬಾರಾದ.
ನಮ್ಮೂರಾಗಿನ ಹನುಮಪ್ಪನ ಮ್ಯಾಲ ನಾಯಿ ಸುಸು ಮಾಡಿದ್ರೂ ಅದಕ ಕಲ್ಲು ತಗೊಂಡು ಹೊಡೆದಿಲ್ಲ. ರಾತ್ರಿ ಲೈಟ್ ಹಚ್ರಿ ಬಿಡ್ರೀ ಸಂಬಂದಿಲ್ಲ. ಸೋಳ್ಳೆ ಕಡಿದು ಡೆಂಗ್ಯೂ, ಮಲೇರಿಯಾ ಬರತಾದ ಸೋಳ್ಳೆ ಕ್ವಾಯಿಲ್ ಹಚ್ಚು ಅಂತ ಪೂಜಾರಿಗೆ ರೆಕಮಂಡೆಶನ್ ಮಾಡಿಲ್ಲ. ಅದಕ ನನಗ ಹನುಮಪ್ಪ ನನ್ನ ಪ್ರೀತಿಯ ಹನುಮ್ಯಾ ಆಗಿದ್ದು.
ಪಾಪ ಹನುಮ್ಯಾ. ಅವನ ಹತ್ರ ಬರೋ ಹುಡುಗ್ಯಾರಿಗೆ ಪ್ರಪೋಸ್ ಮಾಡೊಕೆ ಬರಲಾರದಷ್ಟು ಮುಗ್ಧ ಮನುಷ್ಯಾ. ಎಸ್.ಎಂ.ಎಸ್ ಮಾಡೋಕು ಗೋತ್ತಿಲ್ಲ, ಕಣ್ಣು ಮಿಟುಕಿಸೋಕು ಗೋತ್ತಿಲ್ಲ, ಹಾಯ್ ಹಲೋ ಅನ್ನೊಕು ಭಯ. ಪೂಜಾರಿ ಅವನ ಎದರೆ ಮಧುವೆಯಾಗಿ ಒಂದು ವರ್ಷದೊಳಗೆ ತನ್ನ ಮಕ್ಕಳಿಗೆ ಅವನ ಎದುರೇ ನಾಮಕರಣ ಮಾಡುವಾಗ ಹನುಮಪ್ಪ ಪಿಳಿಪಿಳಿ ಕಣ್ಣು ಬಿಡುತ್ತಾ ನಿಂತಿರುತ್ತಾನೆ ‘ಬಂಗಾರದ ಮನುಷ್ಯ’ ಸಿನಿಮಾದ ರಾಜಕುಮಾರ ತರ ನಿಸ್ವಾರ್ಥಿಯಾಗಿ.
ಅವ ಶಾದಿ.ಕಾಮ್ ನ್ಯಾಗ ನನಗ ಒಂದು ಹುಡುಗಿ ಬೇಕು ಅಂತ ಪ್ರೋಪೈಲ್ ಕ್ರೀಯೇಟ್ ಮಾಡಿಲ್ಲ. ಪೇಸ್‍ಬುಕು ಗೀಸ್ಬುಕ್ಕು, ವಾಟ್ಸ್‍ಪ್, ಟ್ವಟರ್ ಇತ್ಯಾದಿಗಳ ಪರಿಚಯ ವಿಲ್ಲದ ಮಹಾ ಶತದಡ್ಡ ಎಂದರೆ ತಪ್ಪೇನು ಇಲ್ಲ.
ಅಮೀರಖಾನ್, ಶಾರುಕ್‍ಖಾನ್ ಬಿಟ್ಟಿರುವ ಸಿಕ್ಸ್‍ಪ್ಯಾಕ್ ಗೆ ಅದೆಷ್ಟೂ ಹುಡುಗಿಯರು ಸಾಯ್ತಾರೋ ಗೊತ್ತಿಲ್ಲ. ಎಲ್ಲಾ ಊರಿನಲ್ಲಿ ಪ್ರತಿಯೊಂದು ಓನಿಯಲ್ಲಿ ಅಂಗಿ ಬಿಚ್ಚಿ ಬರೀ ಇಲ್ಯಾಸ್ಟಿಕ್ ಚಡ್ಡಿ ಮ್ಯಾಗ ಸಿಕ್ಸ್‍ಪ್ಯಾಕ್ ತೋರಿಸಕೋತ ನಿಂತ್ರು ಒಂದ್ ಹುಡುಗಿನೂ ಅವನ ಜೊತೆ ‘ಸೆಲ್ಪಿ’ ತೊಗೊಂಡಿದ್ದು ಚಾನ್ಸೆಯಿಲ್ಲ.
ಹಂಗಂತ ಅವನೇನು ಬಾರ್‍ಗೆ ಹೋಗಿ ಕಂಟಮಟ ಕುಡಿದು ಉಪ್ಪಿನಕಾಯಿ ನೆಕ್ಕುತ್ತಾ ‘ಸರಾಯಿ ಶಿಷೆಯಲಿ ನನ್ನ ದೇವಿ ಕಾಣುವಳು’ ಅಂತ ಪ್ಯಾಥೋ ಸಾಂಗ್ ಹಾಡಿಲ್ಲ. ಅದಕ ಅಂವ ನನ್ನ ಪ್ರೀತಿ ಪಾತ್ರ ದೇವರು.
ಹನುಮಪ್ಪ ನಿನ್ ಜೋತೆ ಯಾರೂ ಇಲ್ಲ ಅಂತ ಚಿಂತಿ ಮಾಡಬ್ಯಾಡ. ನಾ ಅದೀನಿ. ನಾನು ನಿಂನಂಗ ಯಾವ ಹುಡುಗೀನು ಕಣ್ ಎತ್ತಿ ನೋಡಿಲ್ಲ. (ಒಂದ್ ಕಣ್ಣು ಮುಚ್ಚಿ ನೋಡಿನಿ) ಇಬ್ರು ಸೇರಿ ‘ಹುಡುಗಿರೆಂದ್ರೆ ಡೆಂಜರಪ್ಪೋ’ ಅಂತ ಲೈಡ್‍ಸ್ಪೀಕರ್ ಆನ್ ಮಾಡಿ ಹಾಡಕೊತ ಕುಣಕೊತ ಎಂಜಾಯ ಮಾಡೋಣು.
ಒಂದ್ ಮಾತ ಕೇಳ್ತಿನಿ ಸಿಟ್ಟ ಆಗಬ್ಯಾಡಾ, ನಂಗ ಚೋಲೋ ಹುಡುಗಿ ಸಿಗ್ಲಿ ಅಂತ ಆರ್ಶೀವಾದ ಮಾಡು..!
ಲೇಖನ : ಸಂಗಮೇಶ ಡಿಗ್ಗಿ
8553550012

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮಾನವ ಘನತೆಯ ಪ್ರತಿಪಾದಕ: ಬಿಜವಾಡ ವಿಲ್ಸನ್

 ಮಲಹೊರುವ ಪದ್ದತಿ ತನ್ನ ಕುಲ ಕಸುಬು ಎಂಬ ಕಾರಣಕ್ಕೆ ಆತ್ಮಹತ್ಯೆಗೆ ಮುಂದಾಗಿದ್ದ ಯುವಕನೋರ್ವ ತನ್ನ ದೃಡ ನಿರ್ಧಾರದಿಂದ ದೇಶಾದ್ಯಂತ ಮಲ ಹೊರುವ ಅಮಾನವೀಯ ಪದ್ಧತಿ ವಿರುದ್ಧ ಜನಾಂದೋಲನ ರೂಪಿಸಿ ಮಾನವ ಘನತೆಯ ಬದುಕು (ಡಿಗ್ನಿಟಿ ಆಪ್ ಲೈಪ್)ನ್ನು ತನ್ನ ಹೋರಾಟದ ಮೂಲಕ ಎತ್ತಿ ಹಿಡಿದ ಉದ್ದೇಶಕ್ಕಾಗಿ 2016ನೇ ಸಾಲಿನ ಪ್ರತಿಷ್ಠಿತ ಮ್ಯಾಗ್ಸೆಸೆ ಪ್ರಶಸ್ತಿ ಲಭಿಸಿದೆ. ಅವರ ಹೆಸರು ಕೋಲಾರ ಜಿಲ್ಲೆಯ ಕೆಜಿಎಪ್ ಮೂಲದ ಬಿಜವಾಡ ವಿಲ್ಸನ್. ಆಂದ್ರದ ಓಂಗೋಲ್ ಜಿಲ್ಲೆಯ ಕಂಬಾಲದೇನು ಗ್ರಾಮದ ಬಿಜವಾಡ ಜಾಕೋಬ್ ಎಂಬುವವರು 1935ರ ಸಂದರ್ಭದಲ್ಲಿ ಕೆಜಿಎಪ್‌ಗೆ ಆಗಮಿಸಿ ಇಲ್ಲಿನ ಬಿಜಿಎಂಎಲ್ ಕಾರ್ಖಾನೆಯಲ್ಲಿ ಪೌರಕಾರ್ಮಿಕರಾಗಿ ಕೆಲಸಕ್ಕೆ ಸೇರಿಕೊಳ್ಳುತ್ತಾರೆ. 1966ರಲ್ಲಿ ವಿಲ್ಸನ್ ಜನಿಸಿದರು. ತಮ್ಮ ಪ್ರಾಥಮಿಕ ಶಿಕ್ಷಣವನ್ನು ನೆರೆಯ ಕುಪ್ಪಂನಲ್ಲಿ ನೆರವೇರಿಸಿದ ವಿಲ್ಸನ್ ಕೆಜಿಎಪ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿ ಪಡೆದಿದ್ದಾರೆ. ತದಂತರ ಹೈದರಾಬಾದ್ ವಿವಿಯಲ್ಲಿ ರಾಜಕೀಯ ಶಾಸದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಲಹೊರುವ ಕುಲ ಕಸುಬು ತನ್ನ ಕೊನೆಯ ಮಗನಿಗೆ ತಟ್ಟದಿರಲಿ ಎಂಬ ಕಾರಣಕ್ಕೆ ವಿಲ್ಸನ್ ಅವರನ್ನು ಕುಪ್ಪಂನ ವಿದ್ಯಾರ್ಥಿ ನಿಲಯದಲ್ಲಿ ಸೇರಿಸಿ ಶಿಕ್ಷಣ ಕೊಡಿಸಿದ್ದೇ ಪಾಲಕರ ಮಹತ್ಸಾಧನೆಯಾಗಿತ್ತು. ಮಲ ಹೊರುವ ಸಮುದಾಯದವ ಎಂಬ ಕಾರಣಕ್ಕೆ ಸಹ ಪಾಠಿಗಳಿಂದ ಅವಮಾನಕೊಳಗಾಗಿದ್ದ ವಿಲ್ಸನ್ ಇದಕ್ಕೆ ಕಾರಣ ಹುಡುಕಲು ಹೊರಟಾಗ ಪಾಲಕರು ಸತ್ಯ ಮರೆಮ...

ಮೊಸರು ಮಾರುವ ಹುಡುಗನ ಸೈಕಲ್ ಮತ್ತು ಪ್ಲಾಶ್‍ಬ್ಯಾಕ್ ನೆನಪು

‘ಕಾಲನ ಕೈಗೆ ದೇವರು ಸೃಷ್ಟಿ ಮಾಡಿದ ಜಗತ್ತು ಉಳಿಯುವದಿಲ್ಲವೆಂದ ಮೇಲೆ ನಾವು ಯಾವ ಲೆಕ್ಕ’ ಏಲ್ಲೋ ಓದಿದ ಅಣಿಮುತ್ತು ಮೊನ್ನೆ ದುತ್ತನೆ ಮೆದುಳಿನಲ್ಲಿ ಗುಂಗಿ ಹುಳದಂತೆ ಕಾಡತೊಡಗಿತು. ಕಾರಣವಿಷ್ಟೇ, ಎಮ್.ಎ ಮುಗಿಯುವ ಸಮಯವೂ ಹೌದು, ಅದಕ್ಕಿಂತ ಮುಖ್ಯವಾಗಿ “ಆನಂದಮಾರ್ಗ ಆಶ್ರಮ” ತೊರೆಯಬೇಕಲ್ಲ ಎನ್ನುವ ನೋವು. ಆ ನೋವಿಗೆ ಕಾರಣವಾದವನು ದಿನಾಲೂ ಗಟ್ಟಿ ಕೆನೆ ‘ಮೊಸರು ಮಾರುವ ಹುಡುಗ’ ಮತ್ತು ಆತನ ‘ಸೈಕಲ್’. ಆ ಹುಡುಗ 7ನೇ ತರಗತಿ. ಯಲ್ಲಪ್ಪ ಮನ್ಸೂರ. ಸುಮಾರು 3 ಕಿ.ಮಿ ಸೈಕಲ್ ತುಳಿದು ಮೊಸರು ಮಾರುವ ಕಾಯಕ ಮಾಡುತ್ತಾನೆ. ಅದಕ್ಕಿಂತ ಹೆಚ್ಚಾಗಿ ಮುಂಜಾನೆಯ ಎಳೆ ಬಿಸಿಲಿನಲ್ಲಿ ಮಲಗಿದ್ದ ಹಾಸಿಗೆ ಹೊದ್ದು ಮಲಗಿದ್ದ ನನಗೆ ಎಚ್ಚರಿಸುವ ಅಲರಾಂ ಬೆಲ್ ಎಂತಲೇ ಹೇಳಬಹುದು. ಅವನ ಸೈಕಲ್ ಮಾಯಲೋಕದ ಕಿನ್ನರರು ತಮ್ಮ ವಾಹನಗಳಿಗೆ ಶೃಂಗಾರ ಮಾಡಿದಂತೆ ಗಾಲಿಗಳಿಗೆ ರಿಬ್ಬನ್ ಸುತ್ತಿ, ಯುದ್ಧಕ್ಕೆ ಸಿದ್ಧನಾಗಿದ್ದೆನೆ ಎನ್ನುವ ರೀತಿ ಭಾವುಟ ತೋರಿಸಿ, ಗೆಂಡೆಗಳನ್ನು ಗಾಳಿಗೆ ಹಾರಾಡಿಸುತ್ತಾ ಗಂಟೆ ಬಾರಿಸುವ ಗತ್ತು ನನ್ನನ್ನು ಬಾಲ್ಯದ ಪ್ಲಾಶ್‍ಬ್ಯಾಕ್‍ಗೆ ಕರೆದೊಯ್ಯುವಂತೆ ಮಾಡಿತ್ತು. ತೂತು ಬಿದ್ದು ಪುಕ್ಸಟ್ಟೆ ಅಂಡು ಕಾಣಿಸುವ ದೊಗಳೆ ಚಡ್ಡಿ ಹಾಕಿಕೊಳ್ಳುತ್ತಿದ್ದ ವಯಸ್ಸಿನ ಹುಡುಗ ನಾನಾಗಿದ್ದೆ. ‘ಮೊದ ಮೊದಲು ಕೊಂಡ ಹೀರೋ ಸೈಕಲ್’ ಎಂಬತೆ ಪುಟ್ಟ ಸೈಕಲ್ ನಮ್ಮ ಮನೆಯ ಅಂಗಳವನ್ನು ಅಲಂಕರಿಸಿತ್ತು. ಇಡೀ ಊರಿಗೆ ಮೊದಲ ಸೈಕಲ್. ಊರಿನ ಜನ ಬಂದು ಅದನ್ನು ಮೈಸೂರ...

ಚಂದಿರನಲ್ಲದೇ ನಿನಗೇನು ಕೊಡಲಿ ನಾನು..!

ಅವಳು, ಆಕೆ ಬಳಕಿದರೆ ಬಾತುಕೋಳಿಯ ಮೈಯವಳು, ದುಂಡುಮುಖ, ಗಿಣಿಯನ್ನು ನಾಚಿಸುವ ಮೂಗು, ಗಾಳಿ ಬೆಳಕನ್ನುಂಡು ಉಬ್ಬಿಕೊಂಡ ಗಲ್ಲಗಳು, ಅರಳಿ ನಿಶ್ಚಲವಾಗಿ ಕಾಡಿಸುವ ಮುಗ್ಧ ಕಣ್ಣುಗಳು, ಅಲ್ಲಲಿ ಇಳಿಬಿದ್ದಿರುವ ಮುಂಗುರುಳಿನವಳು, ಹೃದಯಕ್ಕೆ ಬೆಂಕಿ ಹಚ್ಚಿ ಮಾಯವಾಗುವ ಪ್ರೇಮಲೋಕದ ರಾಜಕುಮಾರಿಯಂತವಳು, ಬರಗಾಲ ಬಿದ್ದ ನೆಲಕ್ಕೆ ತಂಪೆರೆಯುವ ಮಳೆ ಸುರಿದವಳು, ಮಿನಾಕ್ಷೀ ಚೌಕ್‍ನ ಪ್ರತಿಯೊಂದು ಕಲ್ಲುಕಲ್ಲಿನಲ್ಲಿಯೂ ಕಾಣಿಸಿದವಳು, ಕಾಡಿಸಿದವಳು, ಹೃದಯಕ್ಕೆ ತೂತು ಕೊರೆದವಳು, ಕ್ಲಾಸ್‍ಲ್ಲಿ ಜುಮುಕಿಗಳನ್ನು ಅಲುಗಾಡಿಸುತ್ತಾ, ಕಾಲ್ಗೆಜ್ಜೆಯ ಸದ್ದುಮಾಡುತ್ತಾ ನಡೆದಾಡುವ ನವಿಲಿನಂತವಳು, ಅದಕ್ಕೂ ಮೀರಿ ಧಿಮಾಕಿನ ರಾಣಿಯ ವಂಶದವಳು. ಅವಳಿಗೆ ನಾನು ಪ್ರೀತಿಯಿಂದ ಆಂಬ್ಯುಲೆನ್ಸ್ ಎಂದು ಕರೆಯುತ್ತಿದ್ದೆ. ಅದಕ್ಕೂ ಒಂದು ಕಾರಣವಿದೆ. ಕೋಚಿಂಗ್‍ಗೆ ಬಿಜಾಪೂರಕ್ಕೆ ಬಂದಾಗ ಗೋಲಬುಂಬಜ್‍ದ ಹಾಗೆ ನನ್ನನ್ನು ಸೆಳೆದವಳು ಅವಳು. ನನ್ನ ಹೃದಯದ ಪ್ರತಿ ಕೋಣೆಯಲ್ಲಿಯೂ ಅವಳ ನೆನಪು ಪ್ರತಿದ್ವನಿಸುತ್ತಿದೆ ಒಂದಲ್ಲಾ ಎಳೇಳು ಸಾರಿ...! ಕ್ಲಾಸ್‍ಲ್ಲಿ ಪ್ಯಾನಿಗಾಗಿ ನಡೆದ ಜಿದ್ದಾಟದಲ್ಲಿ ಗೆದ್ದವಳು ನೀನಲ್ಲವೇ ನನ್ನವಳು. ಅವಳ ಗೆಲ್ಲುವ ಹಠಮಾರಿತನಕ್ಕೆ ಸೋತು ಹೋದ ಹುಚ್ಚು ಪೋರ ನಾನು. ಅವಳ ಒಂದು ನಗುವಿಗಾಗಿ, ವಾರೆಗಣ್ಣಿನ ನೋಟಕ್ಕಾಗಿ, ಕೈಬೆರುಳುಗಳ ಉಂಗುರಗಳ ದರ್ಶನಕ್ಕಾಗಿ, ಇತಿಹಾಸದ ಪೀರಿಯಡ್‍ಲ್ಲಿಯೂ ವಾಕರಿಕೆ ತರುವಷ್ಟು ಭವಿಷತ್‍ಕಾಲದ ಕನಸು ಕಾಣುತ್ತಿದ್ದವನು ನ...