ವಿಷಯಕ್ಕೆ ಹೋಗಿ

ಮಾನವ ಘನತೆಯ ಪ್ರತಿಪಾದಕ: ಬಿಜವಾಡ ವಿಲ್ಸನ್


 ಮಲಹೊರುವ ಪದ್ದತಿ ತನ್ನ ಕುಲ ಕಸುಬು ಎಂಬ ಕಾರಣಕ್ಕೆ ಆತ್ಮಹತ್ಯೆಗೆ ಮುಂದಾಗಿದ್ದ ಯುವಕನೋರ್ವ ತನ್ನ ದೃಡ ನಿರ್ಧಾರದಿಂದ ದೇಶಾದ್ಯಂತ ಮಲ ಹೊರುವ ಅಮಾನವೀಯ ಪದ್ಧತಿ ವಿರುದ್ಧ ಜನಾಂದೋಲನ ರೂಪಿಸಿ ಮಾನವ ಘನತೆಯ ಬದುಕು (ಡಿಗ್ನಿಟಿ ಆಪ್ ಲೈಪ್)ನ್ನು ತನ್ನ ಹೋರಾಟದ ಮೂಲಕ ಎತ್ತಿ ಹಿಡಿದ ಉದ್ದೇಶಕ್ಕಾಗಿ 2016ನೇ ಸಾಲಿನ ಪ್ರತಿಷ್ಠಿತ ಮ್ಯಾಗ್ಸೆಸೆ ಪ್ರಶಸ್ತಿ ಲಭಿಸಿದೆ. ಅವರ ಹೆಸರು ಕೋಲಾರ ಜಿಲ್ಲೆಯ ಕೆಜಿಎಪ್ ಮೂಲದ ಬಿಜವಾಡ ವಿಲ್ಸನ್.
ಆಂದ್ರದ ಓಂಗೋಲ್ ಜಿಲ್ಲೆಯ ಕಂಬಾಲದೇನು ಗ್ರಾಮದ ಬಿಜವಾಡ ಜಾಕೋಬ್ ಎಂಬುವವರು 1935ರ ಸಂದರ್ಭದಲ್ಲಿ ಕೆಜಿಎಪ್‌ಗೆ ಆಗಮಿಸಿ ಇಲ್ಲಿನ ಬಿಜಿಎಂಎಲ್ ಕಾರ್ಖಾನೆಯಲ್ಲಿ ಪೌರಕಾರ್ಮಿಕರಾಗಿ ಕೆಲಸಕ್ಕೆ ಸೇರಿಕೊಳ್ಳುತ್ತಾರೆ. 1966ರಲ್ಲಿ ವಿಲ್ಸನ್ ಜನಿಸಿದರು. ತಮ್ಮ ಪ್ರಾಥಮಿಕ ಶಿಕ್ಷಣವನ್ನು ನೆರೆಯ ಕುಪ್ಪಂನಲ್ಲಿ ನೆರವೇರಿಸಿದ ವಿಲ್ಸನ್ ಕೆಜಿಎಪ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿ ಪಡೆದಿದ್ದಾರೆ. ತದಂತರ ಹೈದರಾಬಾದ್ ವಿವಿಯಲ್ಲಿ ರಾಜಕೀಯ ಶಾಸದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
ಮಲಹೊರುವ ಕುಲ ಕಸುಬು ತನ್ನ ಕೊನೆಯ ಮಗನಿಗೆ ತಟ್ಟದಿರಲಿ ಎಂಬ ಕಾರಣಕ್ಕೆ ವಿಲ್ಸನ್ ಅವರನ್ನು ಕುಪ್ಪಂನ ವಿದ್ಯಾರ್ಥಿ ನಿಲಯದಲ್ಲಿ ಸೇರಿಸಿ ಶಿಕ್ಷಣ ಕೊಡಿಸಿದ್ದೇ ಪಾಲಕರ ಮಹತ್ಸಾಧನೆಯಾಗಿತ್ತು. ಮಲ ಹೊರುವ ಸಮುದಾಯದವ ಎಂಬ ಕಾರಣಕ್ಕೆ ಸಹ ಪಾಠಿಗಳಿಂದ ಅವಮಾನಕೊಳಗಾಗಿದ್ದ ವಿಲ್ಸನ್ ಇದಕ್ಕೆ ಕಾರಣ ಹುಡುಕಲು ಹೊರಟಾಗ ಪಾಲಕರು ಸತ್ಯ ಮರೆಮಾಚಿ ಸಬೂಬು ಹೇಳಿ ನಂಬಿಸಿದ್ದರು, ಆದರೆ, ಕಾಲೇಜು ಮೆಟ್ಟಿಲು ಮುಟ್ಟುವಷ್ಟರಲ್ಲೇ ವಿಲ್ಸನ್‌ಗೆ ಸತ್ಯದ ಅರಿವಾಯಿತು, ಆಗ ಅವರು ಆತ್ಮಹತ್ಯೆಗೂ ಮುಂದಾಗಿದ್ದರು.
ಸ್ವಲ್ಪ ದಿನಗಳ ನಂತರ ತನ್ನೊಳಗಿನ ಸಕಾರಾತ್ಮಕ ಆಲೋ
1986ರಲ್ಲಿ ಸಪಾಯಿ ಕರ್ಮಚಾರಿ ಆಂದೋಲನ ಕಟ್ಟಿ ಅಂದಿನ ಬಿಜಿಎಂಎಲ್ ವ್ಯವಸ್ಥಾಪಕ ನಿರ್ದೇಶಕ ಪಿ.ಎ.ಕೆ ಶೆಟ್ಟಿಗಾರ್ ಅವರ ವಿರುದ್ಧ ಹೋರಾಟ ನಡೆಸಿದ ವಿಲ್ಸನ್ ಬಿಜಿಎಂಲ್ ಸ್ವಾಮ್ಯದಲ್ಲಿದ್ದ ತೆರದ ಒಣ ಶೌಚಾಲಯ(ಡ್ರೆ ಲ್ಯಾಟ್ರೀನ್)ಗಳನ್ನು ನಾಶ ಪಡಿಸಬೇಕು, ಮಲಹೊರುವ ಅಮಾನವೀಯ ಪದ್ಧತಿ ನಿಷೇಸಬೇಕು, ತಪ್ಪಿದರೆ ಅವರ ವಿರುದ್ಧ ಮೊಕದ್ದೆಮೆ ದಾಖಲಿಸಲಾಗುವುದು ಎಂದು ಹೋರಾಟದ ಎಚ್ಚರಿಕೆಯನ್ನು ನೀಡಿದರು. ಇದರ ಪರಿಣಾಮ ತೆರದ ಒಣ ಶೌಚಾಲಯಗಳನ್ನು ತೆರವುಗೊಳಿಸಿ, ನೀರು ಹಾಕಿ ಶುಚಿಗೊಳಿಸುವ ಕಮೋಡ್‌ಗಳನ್ನು ಅಳವಡಿಸಲಾಯಿತು.
ಇಡೀ ಇಂಡಿಯಾ ದೇಶದಲ್ಲಿ ಮನುಷ್ಯರಿಂದ ಮಲ ಸಾಗಿಸುವ ಕ್ರಿಯೆ (ಮ್ಯಾನುಯಲ್ ಸ್ಕ್ಯಾವೇಂಜ್)ಯನ್ನು ನಿಲ್ಲಿಸುವವರೆಗೂ ನನಗೆ ವಿಶ್ರಾಂತಿ ಇಲ್ಲವೆಂದು ಪಣ ತೊಟ್ಟ, ವಿಲ್ಸನ್, ಕೋಲಾರದಿಂದ ಅಂದ್ರ ಪ್ರದೇಶಕ್ಕೆ ತೆರಳಿ ಅಲ್ಲಿಯೂ ಮಲಹೊರುವ ಪದ್ಧತಿಯ ವಿರುದ್ಧ ಆಂದೋಲನವನ್ನು ವಿಸ್ತರಿಸಿದರು. ಇದರ ಪರಿಣಾಮವಾಗಿ 1993ರಲ್ಲಿ ಕೇಂದ್ರ ಸರಕಾರ ಮಲಹೊರುವ ಪದ್ಧತಿಯನ್ನು ನಿಷೇಸಿತು. ಸದರಿ ಮಸೂದೆ ಅನುಷ್ಠಾನಕ್ಕಾಗಿ ತನ್ನ ಹೋರಾಟವನ್ನು ಮುಂದುವರೆಸಿದರು. 2003ರಲ್ಲಿ ದೇಶದ ಸರ್ವೊಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ರಿಟ್ ಅರ್ಜಿ ಸಲ್ಲಿಸಿದರು. ಇದರ ಪರಿಣಾಮವಾಗಿ ಸುಪ್ರೀಂ ಕೋರ್ಟ ಮಲಹೊರುವ ಪದ್ಧತಿ ನಿಷೇಸಿ ದೇಶಾದ್ಯಂತ ಕಟ್ಟುನಿಟ್ಟಿನ ಜಾರಿಗೆ ಆದೇಶಿಸಿತು. ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೂ ಸೂಚಿಸಿತು. ಈ ಮೂಲಕ ಮಲಹೊರುವ ಕಾರ್ಮಿಕರ ವಿಮೋಚನೆಗೆ ದಾರಿ ದೀಪವಾಯಿತು.
 ಬಿಜಿಎಂಎಲ್‌ನಲ್ಲಿ 210 ಡ್ರೆ ಲ್ಯಾಟ್ರಿನ್‌ಗಳು : ಬಿಜಿಎಂಎಲ್‌ನಲ್ಲಿ 210 ಡ್ರೆ ಲ್ಯಾಟ್ರಿನ್‌ಗಳು ಇದ್ದವು ಕಾರ್ಖಾನೆಗೆ ಸೇರಿದ ಎಂ.ವೈ.ಕೆ 1287 ಟ್ರ್ಯಾಕ್ಟರ್ ಗಾಡಿ ಇಡೀ ಕೆ.ಜಿ.ಎಪ್ ನಗರಕ್ಕೇ ಪ್ರಸಿದ್ಧಿಯಾಗಿತ್ತು, ಏಕೆಂದರೆ ಈ ಟ್ರ್ಯಾಕ್ಟರ್ ಗಾಡಿ ಮೂಲಕವೇ ಇಡೀ ಬಿಜಿಎಂಎಲ್ ವ್ಯಾಪ್ತಿಯ ಶೌಚಾಲಯಗಳ ಮಲವನ್ನು ತುಂಬಿಸಿಕೊಂಡು ಹೋಗಲಾಗುತ್ತಿತ್ತು. ಈ ಗಾಡಿ ರಸ್ತೆಯಲ್ಲಿ ಓಡಾಡುವಾಗ ಆಂಬುಲೆನ್ಸ್‌ಗೆ ಹೇಗೆ ರಸ್ತೆ ಬಿಡಲಾಗುತ್ತಿತ್ತೋ ಅದೇ ರೀತಿ ಬಿಡಲಾಗುತ್ತಿತ್ತು. ಜೊತೆಗೆ ಬೆಳಗಿನ ಜಾವ ಮತ್ತು ಸಂಜೆ ಸಮಯದಲ್ಲಿ ಈ ಗಾಡಿ ಓಡಾಡುವಂತಿರಲಿಲ್ಲ. ಮಲ ತುಂಬಿಸಿಕೊಂಡ ಈ ಗಾಡಿ ಸ್ಕೂಲ್ ಆಪ್ ಮೈನ್ಸ್ ಹಿಂಭಾಗದ ಕೃಷ್ಣಾವರಂ ಹಳ್ಳದಲ್ಲಿ ಎಲ್ಲಾ ಮಲವನ್ನು ಸುರಿಯುತ್ತಿತ್ತು.
1986ರ ನಂತರ ಕೆಲವು ಪೌರಕಾರ್ಮಿಕರನ್ನು ಮಲ ತೆಗೆಯುವ ಕೆಲಸದಿಂದ ಮುಕ್ತಿಗೊಳಿಸಿ ಇತರೆ ಕೆಲಸಗಳಿಗೆ, ಅಂದರೆ ಅಕಾರಿಗಳ ಮನೆಗಳ ತೋಟದ ಮಾಲಿಗಳಾಗಿ, ಬಟ್ಟೆ ತೊಳೆಯಲು, ಕಸ ಗುಡಿಸುವುದು, ಮನೆಗಳಲ್ಲಿನ ಶೌಚಾಲಯ ತೊಳೆಯುವುದು ಮುಂತಾದ ಕೆಲಸಗಳಿಗೆ ನಿಯೋಜಿಸಲಾಯಿತು.
  ಒಮ್ಮೆ ವಿಲ್ಸನ್ ತಮ್ಮ ಪದವಿ ಪೂರ್ತಿಗೊಳಿಸಿದ ನಂತರ ಉದ್ಯೋಗ ವಿನಿಮಯ ಕಚೇರಿಯಲ್ಲಿ ನೋಂದಾಯಿಸಲು ಹೋದಾಗ ಬಯಸುವ ಹುದ್ದೆ ಕಾಲಂ ನಲ್ಲಿ ವಿಲ್ಸನ್ ಅವರನ್ನು ಕೇಳದಯೇ ಆ ಅಕಾರಿ ಮಲ ಹೊರುವುದು ಎಂದು ಬರೆದಿದ್ದನ್ನು ಗಮನಿಸಿದ ವಿಲ್ಸನ್, ಇದರಿಂದ ತೀವ್ರ ಆಕ್ರೋಶಗೊಂಡು ಅರ್ಜಿಯನ್ನೇ ಹರಿದು ಹಾಕಿ ಈ ದೇಶದಲ್ಲಿ ಈ ಕೆಲಸವೇ ಇಲ್ಲದಂತೆ ಮಾಡುವೆ ಎಂದು ಪ್ರತಿಜ್ಞೆ ಮಾಡಿ ಹೊರ ನಡೆದಿದ್ದನ್ನು ಅವರ ಜೊತೆಗಾರರು ಮತ್ತು ಮನೆಯವರು ಇಂದಿಗೂ ನೆನಪಿಸಿಕೊಳ್ಳುತ್ತಾರೆ.
 ಅಂದು ಪ್ರಾರಂಭವಾದ ಬಿಜವಾಡ ವಿಲ್ಸನ್ ಹೋರಾಟ ಇಂದಿನವರೆಗೂ ಮುಂದುವರೆದುಕೊಂಡೇ ಬಂದಿದೆ. ನೀವು ನಮ್ಮ ಮಲ ಹೊರುವಿರಾ? ಎಂದು ಪ್ರಶ್ನಿಸಿದ ವಿಲ್ಸನ್ ದೇಶಾದ್ಯಂತ ಮಾನವ ಘನತೆ ಬದುಕು ನಿಮ್ಮ ಜನ್ಮ ಸಿದ್ಧ ಹಕ್ಕು ಎಂಬುದನ್ನು ತನ್ನ ಹೋರಾಟದ ಮೂಲಕ ಎತ್ತಿ ಹಿಡಿದು ಕ್ರಾಂತಿಯನ್ನೇ ಮಾಡಿದ್ದಾರೆ. ಮನುಷ್ಯನ ಆತ್ಮಗೌರವವನ್ನು ಪ್ರತಿಪಾದಿಸಿದ, ಮಾನವ ಘನತೆನ್ನು ಹೆಚ್ಚಿಸಿದ ಹೋರಾಟಗಾರ ಕೋಲಾರದ ಬಂಗಾರದ ಮನುಷ್ಯ ಬಿಜವಾಡ ವಿಲ್ಸನ್ ಕನ್ನಡ ಕುಡಿಯಾಗಿ ದೇಶಕ್ಕೆ ನೀಡಿದ ಈ ಕೊಡುಗೆ ಕನ್ನಡ ನಾಡು ಹೆಮ್ಮೆ ಪಡುವಂತದ್ದು. ಭಾರತದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕನಸಿನ ರಥಕ್ಕೆ ಚಾಲನೆ ನೀಡುವಲ್ಲಿ ಇವರ ಈ ಸಾಧನೆ ಮುಂಚೂಣಿಗೆ ಬಂದರೆ ಅದು ಈ ದೇಶಕ್ಕೆ ಸಲ್ಲಿಸುವ ಮತ್ತೊಂದು ಗೌರವವಾಗಲಿದೆ.
ಕೃಪೆ : ವಾರ್ತಾಭಾರತಿ


ಚನೆಗಳನ್ನು ಗಟ್ಟಿಗೊಳಿಸಿಕೊಂಡರು. ತಮ್ಮ ಅನ್ನ ತಿನ್ನುವ ಕೈಗಳಿಂದ ಮಲಬಾಚುವವರು ಮನೆಯೊಳಗೆ ಬಂದಾಗ ಅಸಹ್ಯ ಪಡುತ್ತಿದ್ದವರನ್ನು ಅಮಾನವೀಯವಾಗಿ ನಡೆಸಿಕೊಳ್ಳುತ್ತಿದ್ದನ್ನು ವಿಲ್ಸನ್ ಸಹಿಸುತ್ತಿರಲಿಲ್ಲ. ಯಾರದೊ ಮಲವನ್ನು ತಮ್ಮ ಕೈಗಳಿಂದ ಬಾಚಿಸಿ ಅಮಾನವೀಯವಾಗಿ ನಡೆಸಿಕೊಳ್ಳುವ ಅಕಾರಿಗಳಿಗೆ ಮಾನವೀಯತೆ ಇದೆಯಾ ಎಂದು ಪ್ರಶ್ನಿಸುತ್ತಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮೊನಚಾದ ಉಗುರು ಬೆನ್ನ ಮೇಲೆ ರಕ್ತ ಉಕ್ಕಿಸಿದೆ

ಒಂದು ಪ್ಲೇಟ್ ತಿಂಡಿ ಬೈಟೂ ಕಾಫೀ ಒಂದು ಒಳ್ಳೆ ಟೈಂಪಾಸ್ ಇಷ್ಟಿದ್ದರೆ ಸಾಕಲ್ಲ ನೀನಿರಲು ಯಾರಿಗೆ ಗೊತ್ತು ನಾನು ಹಸಿದಿದ್ದೆನೆಂದು ಹಸಿಬಿಸಿ ಕನಸೂರಿನಿಂದೆದ್ದು ನೀಟಾಗಿ ಮಡಚಲು ಬೆಡ್‍ಶೀಟ್ ಪಾಪವೆನಿಸುವದು ಅಯ್ಯೋ! ಅಲ್ಲಿ ಮುದುಡಿಕೊಂಡು ಮಲಗಿದ ಕನಸುಗಳಿವೆ ಎಬ್ಬಿಸಲು ನನ್ನಿಂದಾಗುವುದಿಲ್ಲ ಕೂಗಾಡುವ ಅಮ್ಮನಂತೆ ಬಂದೇ ಡಾರ್ಲಿಂಗ್ ಒಂದೇ ನಿಮಿಷ ಬೆರಳ ತುದಿಯಿಂದ ಮೇಘಸಂದೇಶ ಕ್ವಿಕ್ ಎಂದು ಪಟಾಪಟ್ ಒನ್ ಮಿನಿಟ್ ನ್ಯೂಡಲ್ಸ್ ಅಲ್ಲ ಇದು ಹದಮಾಡಿ ಬೇಯಿಸಿದ ಒಗ್ಗರಣೆಗೆ ರುಚಿ ಹಾಕಿದ ಸಾಂಬಾರಿನಂತೆ ಜೀವನ ನಿನಗಷ್ಟು ತಿಳಿಯಲಿಲ್ಲವೇ ಸ್ನಾನ ಮಾಡಿ ರೆಡಿಯಾಗುವುದು ನನಗೆ ಬೋರ್ ಎಂದು! ಐ ಯಾಮ್ ವೇಟಿಂಗ್ ಪಾರ್ ಯು ಒನ್ ಹವರ್ ಹತ್ತಾರು ಸಂದೇಶ ಗೂಡಿನಿಂದ ಹಾರಿದವು ಪಟಪಟನೆ ಪಾರಿವಾಳದಂತೆ ಏನು ಬೇಕು ಸರ್? ಮಾಣಿಗೆ ಉತ್ತರ ಹೇಳಿ ಸಾಕಾಯಿತು ಒಬ್ರು ಬರ್ತಾಯಿದಾರೆ ಪ್ಲೀಜ್ ವ್ಹೇಟ್ ಎಂದು ಟಕ್ ಎಂದು ಗ್ಲಾಸ್ ಕುಕ್ಕಿ ಹೋದ ಅವನಿಗದು ರೂಢಿಯಾಗಿ ಬಿಟ್ಟಿದೆ ಎನಿಸುತ್ತದೆ ಕಪ್ಪು ಕಿವಿಯಲ್ಲಿ ತುರುಕಿರುವ ಹತ್ತಿಯುಂಡೆ ನೋಡಿದರೆ ಅಗೋ ಬಂದೇಬಿಟ್ಟಿ ಬ್ಯೂಟಿಪಾರ್ಲರ್‍ನಿಂದ ಹುಟ್ಟಿದಂತೆ ಅಸಹನೀಯವಾದ ಸಿಟ್ಟು ಮುದುರಿ ಮಲಗಿತು ಮುಗುಳ್ನಗುತ್ತಾ ಐಸ್-ಕ್ರೀಂ ಆರ್ಡರ್ ಮಾಡಿ ಸ್ವಾರಿ ಕಣೋ ಎಂದಾಗ ಅರೇ ಬಿಲ್ಲು ನೀನು ಕೊಟ್ಟೆ! ಕೆಲ್ಸದ ಬಗ್ಗೆ ತಲೆಕೆಡಿಸಿಕೊ ಅಪ್ಪ ಗಂಡು ನೋಡಿದ್ದಾರೆ ನಾಳೆನೆ ಹೋಗಬೇಕು ನಿ...

ಚಂದಿರನಲ್ಲದೇ ನಿನಗೇನು ಕೊಡಲಿ ನಾನು..!

ಅವಳು, ಆಕೆ ಬಳಕಿದರೆ ಬಾತುಕೋಳಿಯ ಮೈಯವಳು, ದುಂಡುಮುಖ, ಗಿಣಿಯನ್ನು ನಾಚಿಸುವ ಮೂಗು, ಗಾಳಿ ಬೆಳಕನ್ನುಂಡು ಉಬ್ಬಿಕೊಂಡ ಗಲ್ಲಗಳು, ಅರಳಿ ನಿಶ್ಚಲವಾಗಿ ಕಾಡಿಸುವ ಮುಗ್ಧ ಕಣ್ಣುಗಳು, ಅಲ್ಲಲಿ ಇಳಿಬಿದ್ದಿರುವ ಮುಂಗುರುಳಿನವಳು, ಹೃದಯಕ್ಕೆ ಬೆಂಕಿ ಹಚ್ಚಿ ಮಾಯವಾಗುವ ಪ್ರೇಮಲೋಕದ ರಾಜಕುಮಾರಿಯಂತವಳು, ಬರಗಾಲ ಬಿದ್ದ ನೆಲಕ್ಕೆ ತಂಪೆರೆಯುವ ಮಳೆ ಸುರಿದವಳು, ಮಿನಾಕ್ಷೀ ಚೌಕ್‍ನ ಪ್ರತಿಯೊಂದು ಕಲ್ಲುಕಲ್ಲಿನಲ್ಲಿಯೂ ಕಾಣಿಸಿದವಳು, ಕಾಡಿಸಿದವಳು, ಹೃದಯಕ್ಕೆ ತೂತು ಕೊರೆದವಳು, ಕ್ಲಾಸ್‍ಲ್ಲಿ ಜುಮುಕಿಗಳನ್ನು ಅಲುಗಾಡಿಸುತ್ತಾ, ಕಾಲ್ಗೆಜ್ಜೆಯ ಸದ್ದುಮಾಡುತ್ತಾ ನಡೆದಾಡುವ ನವಿಲಿನಂತವಳು, ಅದಕ್ಕೂ ಮೀರಿ ಧಿಮಾಕಿನ ರಾಣಿಯ ವಂಶದವಳು. ಅವಳಿಗೆ ನಾನು ಪ್ರೀತಿಯಿಂದ ಆಂಬ್ಯುಲೆನ್ಸ್ ಎಂದು ಕರೆಯುತ್ತಿದ್ದೆ. ಅದಕ್ಕೂ ಒಂದು ಕಾರಣವಿದೆ. ಕೋಚಿಂಗ್‍ಗೆ ಬಿಜಾಪೂರಕ್ಕೆ ಬಂದಾಗ ಗೋಲಬುಂಬಜ್‍ದ ಹಾಗೆ ನನ್ನನ್ನು ಸೆಳೆದವಳು ಅವಳು. ನನ್ನ ಹೃದಯದ ಪ್ರತಿ ಕೋಣೆಯಲ್ಲಿಯೂ ಅವಳ ನೆನಪು ಪ್ರತಿದ್ವನಿಸುತ್ತಿದೆ ಒಂದಲ್ಲಾ ಎಳೇಳು ಸಾರಿ...! ಕ್ಲಾಸ್‍ಲ್ಲಿ ಪ್ಯಾನಿಗಾಗಿ ನಡೆದ ಜಿದ್ದಾಟದಲ್ಲಿ ಗೆದ್ದವಳು ನೀನಲ್ಲವೇ ನನ್ನವಳು. ಅವಳ ಗೆಲ್ಲುವ ಹಠಮಾರಿತನಕ್ಕೆ ಸೋತು ಹೋದ ಹುಚ್ಚು ಪೋರ ನಾನು. ಅವಳ ಒಂದು ನಗುವಿಗಾಗಿ, ವಾರೆಗಣ್ಣಿನ ನೋಟಕ್ಕಾಗಿ, ಕೈಬೆರುಳುಗಳ ಉಂಗುರಗಳ ದರ್ಶನಕ್ಕಾಗಿ, ಇತಿಹಾಸದ ಪೀರಿಯಡ್‍ಲ್ಲಿಯೂ ವಾಕರಿಕೆ ತರುವಷ್ಟು ಭವಿಷತ್‍ಕಾಲದ ಕನಸು ಕಾಣುತ್ತಿದ್ದವನು ನ...