ವಿಷಯಕ್ಕೆ ಹೋಗಿ

#ಬನಾಯೇಂಗೆ_ಮಂದಿರ್: ಅದಕ್ಕೂ ಮುನ್ನ ಕಟ್ಟಬೇಕಾದದ್ದು ಏನು..?


ಅದು ಹೊಸವರ್ಷದ ದಿನ. ಅಂದು ಬೆಳಗ್ಗೆ ಎಲ್ಲರಲ್ಲೂ ಸಂತಸದ ಛಾಯೆ ಮೂಡಿ, ಪರಸ್ಪರ ಶುಭಾಶಯ ಕೋರಿ ನಗುವನ್ನು ಹಂಚಬೇಕಾಗಿತ್ತು. ಆದರೆ, ಕಾಳ್ಗಿಚ್ಚಿನಂತೆ ಹರಡಿದ ಸುದ್ದಿ ಎಲ್ಲರನ್ನು ಬೆಚ್ಚಿ ಬಿಳಿಸಿತು. ಮನೆಯ ಹೊರಗೆ ಕಾಲಿಡದಂತಹ ರೌರವ ನರಕದ ವಾಸನೆ ಮೂಗಿಗೆ ಬಡಿಯುತಿತ್ತು. ಮೂರು ದಿನಗಳ ಕಾಲ ವಿಧಿಸಿದ ಕರ್ಫ್ಯೂ ಹೊಸವರ್ಷದ ಸಂತಸವನ್ನು ಕಿತ್ತುಕೊಳ್ಳುವುದರ ಜೊತೆಗೆ ಮನಸ್ಸಿಗೆ ಆಘಾತವನ್ನುಂಟು ಮಾಡಿತ್ತು. ಶಾಂತಿ ಸೌರ್ಹಾದದ ನಗರ ಈ ದುಷ್ಕೃತ್ಯಕ್ಕೆ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಯಿತು.
ತಹಶೀಲ್ದಾರ ಕಚೇರಿ ಆವರಣದಲ್ಲಿ ಪಾಕಿಸ್ತಾನದ ಧ್ವಜ ಹಾರಿಸಿದ್ದಾರೆ ಎಂಬ ಸುದ್ದಿ ಕಾಳ್ಗಿಚ್ಚಿನಂತೆ ಹರಡಿ ಪ್ರತಿಯೊಬ್ಬರಲ್ಲೂ ಭಯ ಮನೆಮಾಡಿತು. ನೋಡ ನೋಡುತ್ತಿದ್ದಂತೆ ಬಸ್ನ ಗಾಜುಗಳು ಪುಡಿಯಾದವು. ಅಂಗಡಿ ಮುಂಗಟ್ಟುಗಳು ಮುಚ್ಚಿದವು. ಹಿಂದೆಂದೂ ಕಾಣದ ಪೊಲೀಸ್ ಬೂಟಿನ ಸಪ್ಪಳ ಗಲ್ಲಿಗಲ್ಲಿಗಳಲ್ಲ್ಲಿ ಮಾರ್ದನಿಸತೊಡಗಿತು.
ಎಲ್ಲರಲ್ಲೂ ಒಂದೇ ಕೂಗು. ಧ್ವಜ ಹಾರಿಸಿದವರನ್ನು ಬಂಧಿಸಬೇಕು. ಧ್ವಜ ಹಾರಿಸಿದವರು ಮುಸ್ಲಿಮ್ ಸಮುದಾಯದವರು, ಅವರನ್ನು ತಕ್ಷಣ ವಿಚಾರಿಸಿ ಬಂಧಿಸಬೇಕು. ಎಲ್ಲೆಡೆಯೂ ಕೇಸರಿಯ ಶಾಲು, ಹಣೆಯಲ್ಲಿ ಸಿಂಧೂರ ಇಟ್ಟುಕೊಂಡವರು ಹೋರಾಟದ ನಾಯಕತ್ವ ವಹಿಸಿದ್ದರು. ಅವರು ಇನ್ನೂ ಬಲಿಯದ ಮುಖಂಡರು. ಇತ್ತ ಮುಸ್ಲಿಮ್ ಬಾಂಧವರಲ್ಲಿ ತಲ್ಲಣದ ಜೊತೆ ಅಭದ್ರತೆಯ ಭಾವ ಮೂಡಿತು.
ಇಡೀ ನಗರವೆಲ್ಲಾ ಮುಸ್ಲಿಮರನ್ನು ಅನುಮಾನದಿಂದ ನೋಡತೊಡಗಿತು. ಆದರೆ ಧ್ವಜ ಹಾರಿಸಿದವರು ಹಿಂದೂಪರ ಸಂಘಟನೆಯ ವ್ಯಕ್ತಿಗಳು ಎಂದಾಗ ಮತ್ತಷ್ಟು ಭಯಭೀತರಾದರು. ದಾವಲಮಲಿಕ ದೇವರು ಬಾಳಿದ ಸೌರ್ಹಾದದ ನಾಡಿನ ಜನರಲ್ಲಿ ಕೋಮುವಾದದ ಬೀಜ ಬಿತ್ತುತ್ತಿರುವುದು ಸ್ಪಷ್ಟವಾಯಿತು.
ಯಾವ ವ್ಯಕ್ತಿಗಳು ಧ್ವಜ ಹಾರಿಸಿದರೋ ಅದೇ ವ್ಯಕ್ತಿಗಳು ಸರಸರನೇ ಕಂಬವೇರಿ ಧ್ವಜ ಕಿತ್ತು ಸುಟ್ಟು ಹಾಕಿ ದೇಶಭಕ್ತರಂತೆ ವೇಷ ಧರಿಸಿ ಪ್ರತಿಭಟನೆ ಮಾಡುತ್ತಿದ್ದರು. ಅವರ ಘೋಷಣೆಗಳು ಕತ್ತಿಯ ಅಂಚಿಗಿಂತಲೂ ಹರಿತವಾಗಿದ್ದವು. ಮುಸ್ಲಿಮರನ್ನೇ ಗುರಿಯಾಗಿಸಿಕೊಂಡ ಘೋಷಣೆಗಳಾಗಿದ್ದವು. ಇದಕ್ಕೆ ಸ್ಥಳೀಯ ಬಿಜೆಪಿ ಶಾಸಕರು ಜೊತೆಗೂಡಿದರು. ಇತ್ತ ಮುಸ್ಲಿಮ್ ಸಂಘಟನೆಗಳು ಕೂಡಾ ದೇಶದ್ರೋಹಿಗಳನ್ನು ಪತ್ತೆ ಮಾಡಬೇಕು ಎಂದು ಸಭೆ ಕರೆದರು. ಇದಾದ ನಂತರದಲ್ಲಿ ಮುಸ್ಲಿಮ್ ಯುವಕರು ಮನೆಯಿಂದ ಹೊರಗೆ ಬರಲು ಆಗದಂತಹ ಸ್ಥಿತಿ ಎದುರಿಸಿದರು. ಯಾವ ಸಂದರ್ಭದಲ್ಲಿ ನಮ್ಮ ಮೇಲೆ ಕಲ್ಲು ಬೀಳುವುದೊ ಎಂಬ ಆತಂಕದಲ್ಲಿದ್ದರು.
144 ಸೆಕ್ಷನ್ ಜಾರಿಯಾಯಿತು. ಧ್ವಜ ಹಾರಿಸಿದವರನ್ನು ಹುಡುಕಲು ಪೊಲೀಸರು ಭೇಟೆ ಶುರು ಮಾಡಿದರು. ಮೂರೇ ದಿನಗಳಲ್ಲಿ ಆರೋಪಿಗಳು ಸಿಕ್ಕಿ ಬಿದ್ದರು. ಶ್ರೀರಾಮ ಸೇನೆಗೆ ಸೇರಿದ ಹುಡುಗರು. ಹಾರಿಸಿದವರೇ ಪ್ರತಿಭಟನೆ ಮಾಡಿ ಮುಸ್ಲಿಮರ ಮೇಲೆ ಆರೋಪ ಹೊರಿಸುವ ಅವರ ಪ್ರಯತ್ನ ವಿಫಲವಾಯಿತು. ಶ್ರಿರಾಮ ಸೇನೆಯ ಸ್ಥಾಪಕ ಪ್ರಮೋದ್ ಮುತಾಲಿಕ್, ಧ್ವಜ ಹಾರಿಸಿದ್ದು ಆರೆಸ್ಸೆಸ್ ಕಾರ್ಯಕರ್ತರೆಂದೂ ಆಮೇಲೆ ಮುಸ್ಲಿಮರೆಂದೂ ಹೇಳಿಕೆ ನೀಡಿದ್ದರು. ನಂತರ ಶ್ರೀರಾಮ ಸೇನೆ ಸಂಘಟನೆಯ ವಿದ್ಯಾರ್ಥಿ ಮುಖಂಡರು ಹಾರಿಸಿದ್ದು ಎಂದು ಗೊತ್ತಾದಾಗ ಮುತಾಲಿಕ್, ಅವರು ನಮ್ಮ ಸೇನೆಗೆ ಸೇರಿದವರಲ್ಲ ಎಂದು ಸಮರ್ಥಿಸಿಕೊಂಡರು. ಆದರೆ ಧ್ವಜ ಹಾರಿಸಿದ ರಾಕೇಶ್ ಮಠ ಮತ್ತು ಆತನ 5 ಜನ ಸಂಗಡಿಗರು ಶ್ರೀರಾಮ ಸೇನೆಯ ಶಿಬಿರದಲ್ಲಿ ಭಾಗವಹಿಸಿದ್ದು ಪೊಲೀಸರು ಸಾಕ್ಷ ಸಮೇತ ಹಾಜರು ಪಡಿಸಿದ್ದರು.
ಬಂಧನಕ್ಕೊಳಗಾಗಿ ಬಿಡುಗಡೆಯಾದ ರಾಕೇಶ್ ಮಠ ಇಂದು ಅದೇ ಸಂಘಟನೆಯ ಜಿಲ್ಲಾಧ್ಯಕ್ಷನಾಗಿದ್ದಾನೆ. ಆತನ ಸಂಗಡಿಗರು ಪದಾಧಿಕಾರಿಗಳು. ಇದು ಶ್ರೀರಾಮ ಸೇನೆಯ ಕಾರ್ಯವೈಖರಿ. ಅವತ್ತು ಆತ ನಮ್ಮ ಸೇನೆಯವನು ಅಲ್ಲ ಎಂದು ಸಮರ್ಥಿಸಿ ಕೊಂಡ ಮುತಾಲಿಕ್ ಆ ದೇಶದ್ರೋಹಿಯನ್ನೇ ಜಿಲ್ಲಾಧ್ಯಕ್ಷನ್ನಾಗಿ ಮಾಡಿ ಸನ್ಮಾನಿಸಿದ್ದಾರೆ.
ಘಟನೆ ಆದ ನಂತರ ಸಿಂದಗಿಯಲ್ಲಿ ಪರಿಸ್ಥಿತಿ ವಿಷಮಯವಾಯಿತು. ಅಲ್ಲಲ್ಲಿ ಮುಸ್ಲಿಮ್ ಸಮುದಾಯಗಳ ವಿರುದ್ಧ ಸಂಚು ಹೆಣೆಯಲಾಯಿತು. ಆ ಸಂದರ್ಭ ಅವರಿಗೆ ನೆನಪಿಗೆ ಬಂದದ್ದು ಗಣೇಶೋತ್ಸವ.
ಸ್ವಾಂತಂತ್ರ ಹೋರಾಟದ ಸಂದರ್ಭದಲ್ಲಿ ಬ್ರಿಟಿಷರ ಜೊತೆ ಒಗ್ಗೂಡಲು ಗಣೇಶೋತ್ಸವವನ್ನು ಆರಂಭಿಸಿದ ಪರಿಪಾಠ ಇಂದು ಎಷ್ಟರ ಮಟ್ಟಿಗೆ ತಲುಪಿದೆ ಎಂದರೆ ಉತ್ಸವದಲ್ಲಿ ಪೊಲೀಸ್ ಪಡೆಗಳ ಸಂಖ್ಯೆ ಹೆಚ್ಚಾಗುವಷ್ಟರ ಮಟ್ಟಿಗೆ.
ಸಿಂದಗಿ ಯಲ್ಲಿ ಗಣೇಶ ವಿಸರ್ಜನೆ ಮೆರವಣಿಗೆ ಸಂದರ್ಭದಲ್ಲಿ ‘ಬನಾಯೇಂಗೆ ಮಂದಿರ್’ ಹಾಡನ್ನು ಡಿಜೆಗಳ ಮೂಲಕ ಕಿವಿಗಪ್ಪಳಿಸುವಂತೆ ಡ್ಯಾನ್ಸ್ ಮಾಡುತ್ತಾ ಸಾಗುತ್ತಿದ್ದರು. ಮೂರ್ತಿ ನಗರದ ಮಧ್ಯಭಾಗ ಮುಸ್ಲಿಮರು ಹೆಚ್ಚು ವಾಸಿಸುವ ಟಿಪ್ಪುಸುಲ್ತಾನ ಚೌಕ್ ತಲುಪಿದಾಗ ಯಾರೊ ಕಿಡಿಗೇಡಿಗಳು ಮೂರ್ತಿಗೆ ಕಲ್ಲು ಎಸೆದರು. ಇದರಿಂದ ಉದ್ರಿಕ್ತಗೊಂಡ ಭಕ್ತರು ಟಿಪ್ಪುಸುಲ್ತಾನ ಚೌಕವನ್ನು ನೆಲಸಮಗೊಳಿಸಲು ತೊಡಗಿದರು. ಈ ಮೊದಲೆ ಗಲಭೆಯಾಗಬಹುದೆಂಬ ಸೂಚನೆ ತಿಳಿದಿದ್ದರಿಂದ ಭದ್ರತಾ ಪಡೆಗಳು ಗುಂಪನ್ನು ಲಘು ಲಾಠಿಚಾರ್ಜ್ ಮಾಡಿ ಚದುರಿಸಿ ಪರಿಸ್ಥಿತಿ ತಿಳಿಗೊಳಿಸಿದರು. ನಂತರ ಮುಸ್ಲಿಮ್ ಭಾಂದವರು ಸಲ್ಲಿಸಿದ ಮನವಿಗೆ ಹಾಡು ನಿಷೇಧಗೊಂಡಿತು.
ಅದಾದ ನಂತರದ ವರ್ಷದಲ್ಲಿ ನಡೆದ ಮೆರವಣಿಗೆ ಆ ಹಾಡು ನಿಷೇಧಗೊಳಿಸಿದ್ದರೂ ಟಿಪ್ಪುಸುಲ್ತಾನ್ ವೃತ್ತ ಬಂದಾಗ ಹಚ್ಚಿ ಕೋಮುಗಲಭೆ ಸೃಷ್ಟಿಯಾಗುವಂತೆ ವ್ಯವಸ್ಥಿತ ಸಂಚು ಹೂಡಿದ್ದರು. ಮತ್ತೆ ಪೊಲೀಸ್ ಪಡೆಗಳ ಲಾಠಿರುಚಿಯಿಂದ ಕಿಡಿಗೇಡಿಗಳು ಪರಾರಿಯಾದರು. ನಡು ರೋಡಲ್ಲಿ ಅನಾಥವಾಗಿ ನಿಂತಿದ್ದ ಮೂರ್ತಿಯನ್ನು ಪೊಲೀಸರೇ ವಿಸರ್ಜಿಸಿದರು.
ಈಗ ಸಿಂದಗಿ ಸುದ್ದಿಯಲ್ಲಿದೆ. ಶ್ರೀರಾಮ ಸೇನೆಯ ಮುತಾಲಿಕ್ ಈ ಸಲ ಗಣೇಶೋತ್ಸವದಲ್ಲಿ ‘ಬನಾಯೇಂಗೆ ಮಂದಿರ್’ ಹಾಡನ್ನು ಹಾಕಲು ಅನುಮತಿ ಕೊಡಬೇಕು. ಇಲ್ಲದಿದ್ದರೆ ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡುತ್ತೇವೆ ಎಂದು ಪತ್ರಿಕಾ ಹೇಳಿಕೆ ನೀಡಿದ್ದಾರೆ. ಹಬ್ಬ ಮಾಡುವುದು ಅವರ ಉದ್ದೇಶವಲ್ಲ. ಶಾಂತಿಯನ್ನು ಕದಡಬೇಕು ಅಷ್ಟೇ. ತನ್ನ ಕಾರ್ಯಕರ್ತರಿಗೆ ಬಂದೂಕು ಸೇರಿದಂತೆ ಶಸ್ತ್ರಾಸ್ತ್ರ ತರಬೇತಿ ನೀಡಿ ಯುವಕರನ್ನು ತರಬೇತಿ ಜಿಹಾದ್ಗೆ ಪ್ರಚೋದಿಸಿದರು. ಈ ಹಿಂದೆ ಸಿಂದಗಿ ತುಂಬಾ ಶಾಂತವಾಗಿತ್ತು. ಯಾವಾಗ ಸೇನೆ ಕಾಲಿಟ್ಟಿತೋ ಎಲ್ಲವೂ ಹದಗೆಟ್ಟು ಹೋಯಿತು. ನಗರದಲ್ಲಿ ಹಿಂದೂ ಮುಸ್ಲಿಮರ ಜನಗಳ ಬಾಂಧ್ಯವ್ಯ ಒಡೆಯಲು ಸಂಚು ಹೂಡತೊಡಗಿದರು.
ಅಖಂಡ ಹಿಂದೂ ನಾಡು ಕಟ್ಟುತ್ತೇವೆ, ರಾಮ ಮಂದಿರ ಕಟ್ಟದೇ ಪ್ರಾಣ ಬಿಡುವುದಿಲ್ಲ ಎನ್ನುವವರು ಮೊದಲು ಕಟ್ಟಬೇಕಾದದ್ದು ಏನು ಎಂದು ತಿಳಿದುಕೊಳ್ಳಬೇಕಾಗಿದೆ. ನಗರದಲ್ಲಿ ಖಾಸಗಿ ಶಾಲೆಗಳ ಹಾವಳಿಯಿಂದ ಸರಕಾರಿ ಶಾಲೆಗಳು ಮುಚ್ಚುವ ಸ್ಥಿತಿಯಲ್ಲಿವೆ. ಅಲ್ಲಿ ಓದುತ್ತಿರುವ ಮಕ್ಕಳ ಶಿಕ್ಷಣದ ಬಗ್ಗೆ ಸ್ವತಃ ಶಿಕ್ಷಕರಿಗೂ ಗಮನವಿಲ್ಲ. ಅಲ್ಲದೇ, ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಉಚಿತವಿದ್ದರೂ, ಖುಷಿಗೆ ಮಾಮೂಲಿ ಕೊಡಿ ಎಂದು ಕೈ ಚಾಚುವ ಸಿಬ್ಬಂದಿ ಮುಂದೆ ಅಸಹಾಯಕರಾಗಿ ನಿಲ್ಲಬೇಕಾಗಿದೆ. ತಹಶೀಲ್ದಾರ ಕಚೇರಿಯಲ್ಲೂ ಪೀಸು ಕಟ್ಟಲೇಬೇಕಾಗಿದೆ. ಇದಕ್ಕೆ ಕೆಲ ಸ್ಥಳೀಯ ಪತ್ರಕರ್ತರು ಬೆಂಬಲ ನೀಡುತ್ತಿದ್ದಾರೆ.
ಸಾಹಿತಿ ಸತೀಶ್ ಕುಲಕರ್ಣಿಯವರ ಗೀತೆ ನೆನಪಿಗೆ ಬರ್ತಾ ಇದೆ. ‘ಕಟ್ಟತ್ತೇವಾ ನಾವು ಕಟ್ಟುತ್ತೇವಾ, ಒಡೆದ ಮನಸುಗಳ ಕಂಡ ಕನಸುಗಳ ನಾಡ ಕಟ್ಟುತ್ತೇವಾ, ನಮ್ಮ ಮನಸ್ಸಿನಿಂದ ನಿಮ್ಮ ಮನಸಿಗೆ ಸೇತು ಕಟ್ಟುತ್ತೇವಾ, ನೆಲಕ ಹಾಡ ಬರಿಯುತ್ತೇವಾ..’ ಎಂಬುದು. ಮಂದಿರ, ಮಸೀದಿ, ಇಗರ್ಜಿಗಳನ್ನು ಕಟ್ಟುವುದಕ್ಕಿಂತ ಮೊದಲು ಸಾಮರಸ್ಯ ಜೀವನ, ಸೌರ್ಹಾದ, ಅದೆಲ್ಲಕಿಂತ ಹೆಚ್ಚಾಗಿ ಪ್ರೀತಿಯ ಕೋಟೆ ಕಟ್ಟಬೇಕು ಎಂಬುದು ನನ್ನ ಅಭಿಲಾಷೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮೊನಚಾದ ಉಗುರು ಬೆನ್ನ ಮೇಲೆ ರಕ್ತ ಉಕ್ಕಿಸಿದೆ

ಒಂದು ಪ್ಲೇಟ್ ತಿಂಡಿ
ಬೈಟೂ ಕಾಫೀ
ಒಂದು ಒಳ್ಳೆ ಟೈಂಪಾಸ್
ಇಷ್ಟಿದ್ದರೆ ಸಾಕಲ್ಲ ನೀನಿರಲು


ಯಾರಿಗೆ ಗೊತ್ತು
ನಾನು ಹಸಿದಿದ್ದೆನೆಂದು

ಹಸಿಬಿಸಿ ಕನಸೂರಿನಿಂದೆದ್ದು
ನೀಟಾಗಿ ಮಡಚಲು ಬೆಡ್‍ಶೀಟ್
ಪಾಪವೆನಿಸುವದು
ಅಯ್ಯೋ!
ಅಲ್ಲಿ ಮುದುಡಿಕೊಂಡು ಮಲಗಿದ ಕನಸುಗಳಿವೆ
ಎಬ್ಬಿಸಲು ನನ್ನಿಂದಾಗುವುದಿಲ್ಲ
ಕೂಗಾಡುವ ಅಮ್ಮನಂತೆ

ಬಂದೇ ಡಾರ್ಲಿಂಗ್ ಒಂದೇ ನಿಮಿಷ
ಬೆರಳ ತುದಿಯಿಂದ ಮೇಘಸಂದೇಶ
ಕ್ವಿಕ್ ಎಂದು ಪಟಾಪಟ್
ಒನ್ ಮಿನಿಟ್ ನ್ಯೂಡಲ್ಸ್ ಅಲ್ಲ ಇದು
ಹದಮಾಡಿ ಬೇಯಿಸಿದ ಒಗ್ಗರಣೆಗೆ
ರುಚಿ ಹಾಕಿದ ಸಾಂಬಾರಿನಂತೆ ಜೀವನ

ನಿನಗಷ್ಟು ತಿಳಿಯಲಿಲ್ಲವೇ
ಸ್ನಾನ ಮಾಡಿ ರೆಡಿಯಾಗುವುದು ನನಗೆ ಬೋರ್ ಎಂದು!

ಐ ಯಾಮ್ ವೇಟಿಂಗ್ ಪಾರ್ ಯು ಒನ್ ಹವರ್
ಹತ್ತಾರು ಸಂದೇಶ
ಗೂಡಿನಿಂದ ಹಾರಿದವು ಪಟಪಟನೆ ಪಾರಿವಾಳದಂತೆ

ಏನು ಬೇಕು ಸರ್?
ಮಾಣಿಗೆ ಉತ್ತರ ಹೇಳಿ ಸಾಕಾಯಿತು
ಒಬ್ರು ಬರ್ತಾಯಿದಾರೆ ಪ್ಲೀಜ್ ವ್ಹೇಟ್ ಎಂದು
ಟಕ್ ಎಂದು ಗ್ಲಾಸ್ ಕುಕ್ಕಿ ಹೋದ
ಅವನಿಗದು ರೂಢಿಯಾಗಿ ಬಿಟ್ಟಿದೆ ಎನಿಸುತ್ತದೆ
ಕಪ್ಪು ಕಿವಿಯಲ್ಲಿ ತುರುಕಿರುವ ಹತ್ತಿಯುಂಡೆ ನೋಡಿದರೆ

ಅಗೋ ಬಂದೇಬಿಟ್ಟಿ
ಬ್ಯೂಟಿಪಾರ್ಲರ್‍ನಿಂದ ಹುಟ್ಟಿದಂತೆ
ಅಸಹನೀಯವಾದ ಸಿಟ್ಟು ಮುದುರಿ ಮಲಗಿತು
ಮುಗುಳ್ನಗುತ್ತಾ ಐಸ್-ಕ್ರೀಂ ಆರ್ಡರ್ ಮಾಡಿ
ಸ್ವಾರಿ ಕಣೋ ಎಂದಾಗ

ಅರೇ
ಬಿಲ್ಲು ನೀನು ಕೊಟ್ಟೆ!
ಕೆಲ್ಸದ ಬಗ್ಗೆ ತಲೆಕೆಡಿಸಿಕೊ
ಅಪ್ಪ ಗಂಡು ನೋಡಿದ್ದಾರೆ
ನಾಳೆನೆ ಹೋಗಬೇಕು
ನಿನ್ ಮೀಟ್ ಮಾಡೋದು ಕಷ್ಟ ಕಣೋ
ಇನ್ನು ಏನೇನೋ...

ನಿಂತ ಜಾಗದ…

ಬಾ ಮಳೆಯೆ ಬಾ....

ಮೂರುಸಂಜೆ ಸಮಯ. ಭೂಮಿಯನ್ನು ಅಪ್ಪಿ ತಬ್ಬಿಕೊಳ್ಳಲು ಮಳೆ ಹನಿಗಳು ಪೈಪೋಟಿಗೆ ಬಿದ್ದಂತೆ ತಾಮುಂದು ನಿಮುಂದು ಎಂದು ಧರಣಿಯ ಕೆನ್ನೆಗೆ ಮುತ್ತಿಕ್ಕುತ್ತವೆ. ಕಾದು ಸುಡುವ ಹಂಚಾಗಿದ್ದ ಭೂಮಿಗೆ ತಣ್ಣನೆಯ ಬಟ್ಟೆಯನ್ನು ಹೊದಿಸಿದ ಅನುಭವ. ಊರ ತುಂಬ ಪಸರಿಸಿದ ಮಣ್ಣ ಸುವಾಸನೆಗೆ ಪಾರಿಜಾತದ ಘಮವು ಸಪ್ಪೆಯಾಗಿದೆ.
ಯಾವ ಸೀಮೆಯ, ಯಾವ ಊರಿನ, ಯಾವ ಕೇರಿಯ ನೀರು ಆವಿಯಾಗಿ, ಹೆಪ್ಪುಗಟ್ಟಿ, ಮೋಡವಾಗಿ ಕರಗಿ ನೀರಾಗಿ ಪರಿಚಯವಿಲ್ಲದ ಜಾಗದಲ್ಲಿ ನಾಚಿಕೆ ಪಟ್ಟುಕೊಳ್ಳದೆ ಜಂಬವಿಲ್ಲದೆ ಸುರಿಯುವ ಅಮೃತಘಳಿಗೆಗೆ ಮಣ್ಣಿನೊಳಗೆ ಅಡಗಿ ಕುಳಿತ ಬೀಜ, ಸಸಿ, ಬೇರು ಬಾಯ್ತೆರೆದು ನಿಂತಿರುತ್ತದೆ ತುದಿಗಾಲ ಮೇಲೆ ಬೊಗಸೆಗಣನ್ನನ್ನು ಅರಳಿಸುತ್ತಾ.
ಅಲ್ಲೆಲ್ಲೂ ಅಣಬೆಗಳು ಹಿಡಿಮಳೆಗೆ ಭೂಮಿ ನೆನೆಯುವದನ್ನು ತಪ್ಪಿಸಲು ಕ್ಷಣಮಾತ್ರದಲ್ಲಿ ಹೂವಾಗಿ ಅರಳಿ ನಿಲ್ಲುತ್ತವೆ ಹಬ್ಬದ ಛತ್ರಿ ಚಾಮರ ಕಂಡಂತೆ. ಪುಟುಪುಟು ನೆಗೆಯುತ್ತಾ ಓಡಾಡುವ ಕಪ್ಪೆಮರಿಗಳ ಆಟ ಪುಟ್‍ಬಾಲ್ ಆಟ ನೋಡುವಷ್ಟೇ ಮಜಭೂತವಾಗಿರುತ್ತದೆ.
ದೇವರ ಆಟ ಬಲ್ಲವರ್ಯಾರು? ಹಸಿದು ಬರಗೆಟ್ಟ ಗಿಡಗಳು ಹಸಿರಾಗಲೂ ಜಡಿಮಳೆ ಬಸಿರಾಗುವಂತೆ ಮಾಡುತ್ತದೆ. ಎಲೆಯುದರಿ ಮುದುಡಿಕೊಂಡ ಗಿಡಗಳು ಮೆಲ್ಲನೆ ಮೈ ಕೊಡವಿಕೊಂಡು ಹಣ್ಣಾದ ಹಳದಿ ಎಲೆಗಳನ್ನು ಉದುರಿಸಿ ಚಿಗುರೆಲೆಗೆ ಜಾಗ ಮಾಡಿಕೊಡುತ್ತದೆ. ಮೆಲ್ಲಗೆ ಹೂವೊಂದು ಗರ್ಭದಿಂದ ಹೊರಬಂದು ನಗುತ್ತಾ ನಾಚಿ ನೀರಾಗುತ್ತದೆ ದುಂಬಿ ಬಂದು ಕುಳಿತಾಗ.
ಕೊಟ್ಟಿಗೆಯಲ್ಲಿ ಧೂಳು ಬಡಿದುಕೊಂಡ ನೇಗಿಲು, ಬ…